ಡಾಲಿ ಪಿಕ್ಚರ್ಸ್‌ನಿಂದ ಮತ್ತೊಂದು ಚಿತ್ರ ಘೋಷಣೆ
ಬೆಂಗಳೂರು, 04 ಜನವರಿ (ಹಿ.ಸ.) : ಆ್ಯಂಕರ್ : ನಟ ಡಾಲಿ ಧನಂಜಯ ಅವರ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಬ್ಯಾನರ್‌ನಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಪ್ರಸಿದ್ಧ ಗಾದೆಯಿಂದ ಸ್ಫೂರ್ತಿ ಪಡೆದು ರೂಪುಗೊಂಡ ಈ ಚಿತ್ರದ ಟೈಟಲ್ ‘ಹೆಗ್ಗಣ ಮುದ್ದು’ ಎಂದು ನಿಗ
New film


ಬೆಂಗಳೂರು, 04 ಜನವರಿ (ಹಿ.ಸ.) :

ಆ್ಯಂಕರ್ : ನಟ ಡಾಲಿ ಧನಂಜಯ ಅವರ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಬ್ಯಾನರ್‌ನಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ.

‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಪ್ರಸಿದ್ಧ ಗಾದೆಯಿಂದ ಸ್ಫೂರ್ತಿ ಪಡೆದು ರೂಪುಗೊಂಡ ಈ ಚಿತ್ರದ ಟೈಟಲ್ ‘ಹೆಗ್ಗಣ ಮುದ್ದು’ ಎಂದು ನಿಗದಿಪಡಿಸಲಾಗಿದೆ.

ವಿಭಿನ್ನ ಹಾಗೂ ಕುತೂಹಲಕಾರಿ ಶೀರ್ಷಿಕೆಯೊಂದಿಗೆ ಸಿನಿಮಾ ಘೋಷಣೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದೆ.

‘ಹೆಗ್ಗಣ ಮುದ್ದು’ ಪೂರ್ಣ ಮೈಸೂರು ನಟನೆಯ ಚಿತ್ರವಾಗಿದ್ದು, ಅವಿನಾಶ್ ಬಲೆಕ್ಕಳ ಅವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ನಾಯಕನಾಗಿ ಪೂರ್ಣ ಅಭಿನಯಿಸುತ್ತಿದ್ದು, ನಾಯಕಿಯಾಗಿ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ವೇದ’ ಚಿತ್ರದಲ್ಲಿ ಈಗಾಗಲೇ ಗಮನ ಸೆಳೆದಿದ್ದ ಅದಿತಿ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಪ್ರಸಿದ್ಧ ಗಾದೆ ಮಾತಿನಿಂದ ಪ್ರೇರಿತವಾಗಿರುವ ಟೈಟಲ್‌ನಿಂದಲೇ ಚಿತ್ರದ ಕಥಾಹಂದರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ‘ಹೆಗ್ಗಣ ಮುದ್ದು’ ಒಂದು ಡ್ರಾಮಾ ಥ್ರಿಲ್ಲರ್ ಸಿನಿಮಾವಾಗಿದ್ದು, ಸಂಬಂಧಗಳು ಮತ್ತು ಮಾನವ ಮನೋಭಾವಗಳ ಸುತ್ತ ಕಥೆ ಸಾಗಲಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್ ಬಲೆಕ್ಕಳ, “ಇದು ಸಂಬಂಧಗಳ ಕುರಿತ ಸಿನಿಮಾ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂದು ನಾವು ಹೇಳುವಂತೆ, ಈ ಚಿತ್ರದಲ್ಲಿ ‘ನನಗೆ ನಾನೆ ಮುದ್ದು’ ಎನ್ನುವ ಅರ್ಥವನ್ನು ತೋರಿಸಲಾಗಿದೆ” ಎಂದು ಹೇಳಿದರು.

ಚಿತ್ರದ ಚಿತ್ರಿಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಟೈಟಲ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮೂಲಕ ಈಗಾಗಲೇ ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ‘ಹೆಗ್ಗಣ ಮುದ್ದು’ ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ನಿರ್ದೇಶನ ಮಾಡಿದ್ದು, ನಚಿಕೇತ್ ಬಲೆಕ್ಕಳ ಅವರ ಛಾಯಾಗ್ರಹಣ ಇದೆ.

ಡಾಲಿ ಪಿಕ್ಚರ್ಸ್‌ನಿಂದ ‘ಜೆಸಿ’ ಸಿನಿಮಾ ತೆರೆಕಂಡ ಬಳಿಕ ‘ಹೆಗ್ಗಣ ಮುದ್ದು’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ವಿಭಿನ್ನ ವಿಷಯ, ಹೊಸ ತಂಡ ಮತ್ತು ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande