ಕೊಟ್ಟೂರಲ್ಲಿ ತ್ರಿವಳಿ ಕೊಲೆ ; ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ
ಕೊಟ್ಟೂರು, 31 ಜನವರಿ (ಹಿ.ಸ.) : ಆ್ಯಂಕರ್ : ದುಶ್ಚಟಗಳ ದಾಸನಾಗಿದ್ದ ಮಗನೇ ತಂದೆ - ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿ, ಬಾಡಿಗೆ ಮನೆಯಲ್ಲಿ ನಾಲ್ಕು ಅಡಿಯ ಗುಂಡಿಯನ್ನು ತೋಡಿ, ಅದರಲ್ಲಿಯೇ ಹೂತಿಟ್ಟು `ಕಾಣೆಯಾದ ಕಥೆ''ಕಟ್ಟಿ ಸಿಕ್ಕಿಕೊಂಡಿರುವ ಘಟನೆ ವರದಿಯಾಗಿದೆ. ಅಕ್ಷಯ್ ಕುಮಾರ್ (24)
ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರಲ್ಲಿ ತ್ರಿವಳಿ ಕೊಲೆ : ಮೂರೂ ಶವಗಳು ಪೋಸ್ಟ್‍ಮಾರ್ಟ್‍ಂಗೆ


ಕೊಟ್ಟೂರು, 31 ಜನವರಿ (ಹಿ.ಸ.) :

ಆ್ಯಂಕರ್ : ದುಶ್ಚಟಗಳ ದಾಸನಾಗಿದ್ದ ಮಗನೇ ತಂದೆ - ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿ, ಬಾಡಿಗೆ ಮನೆಯಲ್ಲಿ ನಾಲ್ಕು ಅಡಿಯ ಗುಂಡಿಯನ್ನು ತೋಡಿ, ಅದರಲ್ಲಿಯೇ ಹೂತಿಟ್ಟು `ಕಾಣೆಯಾದ ಕಥೆ'ಕಟ್ಟಿ ಸಿಕ್ಕಿಕೊಂಡಿರುವ ಘಟನೆ ವರದಿಯಾಗಿದೆ.

ಅಕ್ಷಯ್ ಕುಮಾರ್ (24) ಕೊಲೆ ಆರೋಪಿ. ಆರೋಪಿಯು ತನ್ನ ತಂದೆ ಭೀಮರಾವ್, ತಾಯಿ ಜಯಲಕ್ಷ್ಮೀ ಮತ್ತು ಸಹೋದರಿ ಅಮೃತ (17)ಳನ್ನು ಜನವರಿ 27 ರಂದು ಕೊಲೆ ಮಾಡಿ, ಒಂದೇ ಗುಂಡಿಯಲ್ಲಿ ಹೂಳಿಟ್ಟು ಬೆಂಗಳೂರಿಗೆ ಹೋಗಿ, ತನ್ನ `ಪೋಷಕರು, ಸಹೋದರಿ ಕಾಣೆಯಾಗಿದ್ದಾರೆ' ಎಂದು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಬೆಂಗಳೂರಿನ ತಿಲಕ್ ನಗರದ ಪೊಲೀಸರು ಅಕ್ಷಯ್ ಕುಮಾರ್ ನೀಡಿರುವ ದೂರಿನ ಕುರಿತಾಗಿ, ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿ, ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಅಲ್ಲದೇ, ಆರೋಪಿ ಕೊಟ್ಟೂರಿನಲ್ಲಿ ಬಾಡಿಗೆ ಇದ್ದ ಮನೆಯ ವಿಳಾಸವನ್ನು ಪಡೆದು, ವಿಜಯನಗರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳ ಭೇಟಿಗೆ ಮನವಿ ಮಾಡಿದ್ದಾರೆ. ಆಗಲೇ,

ಆರೋಪಿಯು ಗುಂಡಿ ತೋಡಿ ಶವಗಳನ್ನು ಹಾಕಿ ಮುಚ್ಚಿರುವುದು ತಿಳಿದಿದೆ.

ಬೆಂಗಳೂರಿನ ತಿಲಕ್ ನಗರದ ಪೊಲೀಸರು ಆರೋಪಿಯನ್ನು ಕೊಟ್ಟೂರು ಪಟ್ಟಣದ ಹರಪನಹಳ್ಳಿಯ ಎಲ್‍ಬಿ ಬಡಾವಣೆಯ ಬಾಡಿಗೆ ಮನೆಗೆ ಮಹಜರಿಗೆ ಶನಿವಾರ ಕರೆತಂದು, ಮನೆಯಲ್ಲಿದ್ದ ಗುಂಡಿಯನ್ನು ತೆಗೆದಾಗ, ಆರೋಪಿಯು ಮೊದಲಿಗೆ ತಾಯಿಯ ದೇಹವನ್ನು, ಅದರ ಮೇಲೆಯೇ ತಂಗಿಯ ದೇಹವನ್ನು ಹಾಗೂ ಕೊನೆಯಲ್ಲಿ ತಂದೆಯ ದೇಹವನ್ನು ಹಾಕಿ, ಟೈಲ್ಸ್‍ಗಳಿಂದ ಮುಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಆರೋಪಿ ಅಕ್ಷಯ್ ಕುಮಾರ್ ದುಶ್ಚಟಗಳ ದಾಸನಾಗಿದ್ದು, ಹಣಕ್ಕಾಗಿ ತಂದೆ - ತಾಯಿಯನ್ನು ನಿರಂತರ ಪೀಡಿಸುತ್ತಿದ್ದರು. ಆರೋಪಿಯ ತಂದೆ ಒಂದು ಆಸ್ತಿಯನ್ನು ಮಾರಾಟ ಮಾಡಿದ್ದರು. ಈ ಕುಟುಂಬವು ಕೊಟ್ಟೂರು ಪಟ್ಟಣದಲ್ಲಿ ಟೈರ್ ರಿಟ್ರೇಡಿಂಗ್ ಘಟಕವನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರೂ ಶವಗಳನ್ನು ಹೊರ ತೆಗೆದು, ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೋಸ್ಟ್‍ಮಾರ್ಟ್‍ಂ ನಡೆದ ನಂತರ, ವಿಚಾರಣೆ ಮುಂದುವರೆಯಲಿದೆ. ಕೊಲೆಗೆ ಕಾರಣಗಳು ತಿಳಿದಿಲ್ಲ. ತನಿಖೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande