
ಕೋಲಾರ ಜನವರಿ ೨೯ (ಹಿ.ಸ) :
ಆ್ಯಂಕರ್ : ಕೆಜಿಎಫ್ ನಗರದ ಆಂಡ್ರಸನ್‌ಪೇಟೆ ಕಾರೋನೇಷನ್ ಟೌನ್ ಬಳಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುತ್ತಿರುವುದರ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ ಬಿ.ಮಂಜುನಾಥ ಮತ್ತು ಸಿಬ್ಬಂದಿ ಹಾಗೂ ಕೆ.ಜಿ.ಎಫ್ ತಾಲ್ಲೂಕಿನ ಆಹಾರ ನಿರೀಕ್ಷಕರು ವಿ.ರಘು ರವರೊಂದಿಗೆ ಜಂಟಿ ಕಾರ್ಯಚರಣೆ ಮೂಲಕ ದಾಳಿ ನಡೆಸಿ ಅಕ್ರಮವಾಗಿ ಗ್ಯಾಸ್ ಭರ್ತಿ(ರೀಫಿಲ್ಲಿಂಗ್) ಮಾಡುತ್ತಿದ್ದ ಆರೋಪಿ ಪಾಷ ಜಾನ್ ರವರನ್ನು ಬಂಧಿಸಿದ್ದಾರೆ. ಅಲ್ಲಿದ್ದಂತಹ ರೂ.೨೦,೦೦೦/- ಮೌಲ್ಯದ ಗೋ ಗ್ಯಾಸ್ ಕಂಪನಿಯ ೨ ಸಿಲಿಂಡರ್‌ಗಳು, ಗ್ಯಾಸ್ ರೀಪ್ಲಿಂಗ್‌ಗೆ ಬಳಸುತ್ತಿದ್ದ ಸ್ಟಾ÷್ಯಂಡ್ ಸಮೇತ ಪಂಪ್ ಮತ್ತು ಪೈಪ್‌ಗಳು ಹಾಗೂ ವಿದ್ಯುತ್ ತೂಕದ ಯಂತ್ರವನ್ನು ವಶಪಡಿಸಿಕೊಂಡು ರೀತ್ಯ ದಾಖಲಿಸಿಕೊಂಡು ಆರೋಪಿ ವಿರುದ್ದ ಕಾನೂನು ಕ್ರಮ ವಹಿಸಲಾಗಿರುತ್ತದೆ.
ಜ.೨೯ ರಂದು ಆಂಡ್ರಸನ್‌ಪೇಟೆಯ ಮಾರ್ಕೇಟ್ ನಲ್ಲಿರುವ ಆಂತೋಣಿ ರವರ ಅಂಗಡಿಯಲ್ಲಿ ಆಂತೋಣಿ ಮತ್ತು ಆತನ ಸ್ನೇಹಿತನಾದ ಅರುಣ್ ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಒಂದು ಪುಸ್ತಕದಲ್ಲಿ ನಂಬರ್‌ಗಳನ್ನು ಬರೆದುಕೊಳ್ಳುತ್ತಾ ೩೫ ರೂಗಳನ್ನು ಕಟ್ಟಿದರೆ ತಾವು ಕಟ್ಟಿದ ನಂಬರ್ ಬಂದರೆ ೧೪,೦೦೦/ರೂಗಳನ್ನು ಕೊಡುತ್ತೇನೆಂದು ಹೇಳುತ್ತಾ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿಯನ್ನು ಮೇರೆಗೆ, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಬಿ.ಮಂಜುನಾಥ ಮತ್ತು ಸಿಬ್ಬಂದಿ ಕೂಡಲೇ ದಾಳಿ ನಡೆಸಿ ಲೂರ್ದನಗರ ವಾಸಿಗಳಾದ ಆಂತೋಣಿ ಅರುಣ್‌ಕುಮಾರ್ ರವರನ್ನು ವಶಕ್ಕೆ ಪಡೆದುಕೊಂಡು ರೂ.೨,೦೧೦/- ನಗದು ಹಾಗೂ ಪುಸ್ತಕವನ್ನು ವಶಪಡಿಸಿಕೊಂಡಿದ್ದಾರೆ.
ಜ.೩೦ ರಂದು ಕೆ.ಜಿ.ಎಫ್-ಶಾಂತಿಪುರA ರಸ್ತೆಯಲ್ಲಿನ ಬಳ್ಳಗಿರಿ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯದ ಪಾಕೇಟ್‌ಗಳನ್ನು ಮರೆ ಮಾಚಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಂದAತಹ ಖಚಿತ ಮಾಹಿತಿಯನ್ನು ಆಧರಿಸಿ, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಬಿ.ಮಂಜುನಾಥ ಮತ್ತು ಸಿಬ್ಬಂದಿ ಕೂಡಲೇ ದಾಳಿ ನಡೆಸಿ, ಬಳ್ಳಗೆರೆ ಗ್ರಾಮದ ವಾಸಿ ಮಂಜುನಾಥ (೪೪ ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ರೂ.೩,೮೦೦/-ರೂ ಮೌಲ್ಯದ ಮದ್ಯದ ಪಾಕೇಟ್‌ಗಳು ಮತ್ತು ರೂ.೧,೫೭೦ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್‌ಪಿ ವಿ.ಲಕ್ಷö್ಮಯ್ಯ ಮತ್ತು ರಾಬರ್ಟ್ಸನ್‌ಪೇಟೆ ವೃತ್ತ ಇನ್ಸ್ಪೆಕ್ಟರ್ ಪಿ.ಎಂ.ನವೀನ್ ರವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಅಕ್ರಮ ಸಿಲಿಂಡರ್ ಭರ್ತಿ ಜಾಲವನ್ನು ಮತ್ತು ಅಕ್ರಮ ಮದ್ಯ ಮಾರಾಟ ವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಆಂಡ್ರಸನ್‌ಪೇಟೆ ಪಿ.ಎಸ್.ಐ ಬಿ.ಮಂಜುನಾಥ, ಎ.ಎಸ್.ಐ ಅಣ್ಣಪ್ಪ ಮತ್ತು ಸಿಬ್ಬಂದಿಯಾದ ರಾಜೇಂದ್ರ, ಗೋಪಿ, ರಮೇಶ್ ಜಂಬಗಿ, ಸಂಪತ್ ಕುಮಾರ್ ಜೀಪ್ ಚಾಲಕರಾದ ಮನೋಹರ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ : ಕೆಜಿಎಫ್ ಆಂಡರ್‌ಸನ್ ಪೇಟೆ ಪೊಲೀಸರು ಅಕ್ರಮವಾಗಿ ಸಿಲೆಂಡರ್ ಭರ್ತಿ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್