ಆಸ್ಟ್ರೇಲಿಯನ್ ಓಪನ್ 2026 ; ಮೆರ್ಟೆನ್ಸ್–ಜಾಂಗ್ ಮಹಿಳಾ ಡಬಲ್ಸ್ ಚಾಂಪಿಯನ್
ಮೆಲ್ಬೋರ್ನ್, 31 ಜನವರಿ (ಹಿ.ಸ.) : ಆ್ಯಂಕರ್ : ಆಸ್ಟ್ರೇಲಿಯನ್ ಓಪನ್ 2026 ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಮತ್ತು ಚೀನಾದ ಜಾಂಗ್ ಶುವಾಯ್ ಜೋಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಅನ್ನಾ ಡ್ಯಾನಿ
Mertens-Zhang


ಮೆಲ್ಬೋರ್ನ್, 31 ಜನವರಿ (ಹಿ.ಸ.) :

ಆ್ಯಂಕರ್ : ಆಸ್ಟ್ರೇಲಿಯನ್ ಓಪನ್ 2026 ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಮತ್ತು ಚೀನಾದ ಜಾಂಗ್ ಶುವಾಯ್ ಜೋಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಅನ್ನಾ ಡ್ಯಾನಿಲಿನಾ ಮತ್ತು ಸೆರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ಜೋಡಿಯನ್ನು 7-6 (4), 6-4 ಸೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಪಂದ್ಯದ ಮೊದಲ ಸೆಟ್‌ನಲ್ಲಿ ಮೆರ್ಟೆನ್ಸ್–ಜಾಂಗ್ ಜೋಡಿ 0-3 ಹಾಗೂ ನಂತರ 1-4 ಅಂತರದಲ್ಲಿ ಹಿನ್ನಡೆಯಲ್ಲಿದ್ದರೂ, ಅಸಾಧಾರಣ ಹೋರಾಟ ಪ್ರದರ್ಶಿಸಿ ಟೈಬ್ರೇಕರ್‌ನಲ್ಲಿ ಸೆಟ್‌ನ್ನು ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ 5-0 ಮುನ್ನಡೆ ಸಾಧಿಸಿದ ಈ ಜೋಡಿ, ಎದುರಾಳಿಗಳ ಪ್ರತಿರೋಧದ ನಡುವೆಯೂ ಹಿಡಿತ ಕಳೆದುಕೊಳ್ಳದೆ ಪಂದ್ಯವನ್ನು ಜಯಭೇರಿ ಬಾರಿಸಿತು.

ಈ ಗೆಲುವಿನೊಂದಿಗೆ ಡಬಲ್ಸ್ ಶ್ರೇಯಾಂಕದಲ್ಲಿ ಪ್ರಸ್ತುತ ಆರನೇ ಸ್ಥಾನದಲ್ಲಿರುವ ಎಲಿಸ್ ಮೆರ್ಟೆನ್ಸ್, ಆಸ್ಟ್ರೇಲಿಯನ್ ಓಪನ್ ನಂತರ ಮತ್ತೆ ವಿಶ್ವದ ನಂಬರ್–1 ಡಬಲ್ಸ್ ಆಟಗಾರ್ತಿ ಸ್ಥಾನಕ್ಕೆ ಮರಳಲಿದ್ದಾರೆ. ಇದು ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ಮೆರ್ಟೆನ್ಸ್ ಅವರ ವೃತ್ತಿಜೀವನದ 40ನೇ ವಾರದ ಅಗ್ರಸ್ಥಾನವಾಗಿದೆ.

ಮೆರ್ಟೆನ್ಸ್ ಕಳೆದ ವರ್ಷ ವೆರೋನಿಕಾ ಕುಡೆರ್ಮೆಟೋವಾ ಜೊತೆ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಶನಿವಾರದ ಜಯವು ಅವರ ವೃತ್ತಿಜೀವನದ ಆರನೇ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯಾಗಿದ್ದು, ಈ ಹಿಂದೆ 2021 ಮತ್ತು 2024ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಟ್ರೋಫಿ ಜಯಿಸಿದ್ದರು.

ಮೆರ್ಟೆನ್ಸ್–ಜಾಂಗ್ ಜೋಡಿ 2022ರಲ್ಲಿ ವಿಂಬಲ್ಡನ್ ಡಬಲ್ಸ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರೆ, ಡ್ಯಾನಿಲಿನಾ–ಕ್ರುನಿಕ್ ಜೋಡಿ ಕಳೆದ ವರ್ಷದ ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿತ್ತು.

ಇನ್ನೊಂದೆಡೆ, ಶುಕ್ರವಾರ ನಡೆದ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಒಲಿವಿಯಾ ಗಾಡೆಕಿ ಮತ್ತು ಜಾನ್ ಪೀರ್ಸ್ ಜೋಡಿ, ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಕ್ ಮತ್ತು ಮ್ಯಾನುಯೆಲ್ ಗಿಗ್ನಾರ್ಡ್ ಅವರನ್ನು 4-6, 6-3, 10-8 ಸೆಟ್‌ಗಳಿಂದ ಮಣಿಸಿತು. ಈ ಮೂಲಕ 1989ರ ನಂತರ ಸತತ ಎರಡು ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಜೋಡಿ ಎಂಬ ದಾಖಲೆಗೆ ಪಾತ್ರರಾದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande