
ಮೆಲ್ಬೋರ್ನ್, 30 ಜನವರಿ (ಹಿ.ಸ.) :
ಆ್ಯಂಕರ್ : ಆಸ್ಟ್ರೇಲಿಯಾದ ಒಲಿವಿಯಾ ಗ್ಯಾಡೆಕಿ ಮತ್ತು ಜಾನ್ ಪೀರ್ಸ್ ಜೋಡಿ 2026ರ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಇತಿಹಾಸ ನಿರ್ಮಿಸಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಕ್–ಮ್ಯಾನುಯೆಲ್ ಗಿಗ್ನಾರ್ಡ್ ಜೋಡಿಯನ್ನು 4-6, 6-3, 10-8 ಅಂತರದಲ್ಲಿ ಸೋಲಿಸಿದರು.
ಈ ಸಾಧನೆಯೊಂದಿಗೆ 37 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಸತತವಾಗಿ ಗೆದ್ದ ಮೊದಲ ಜೋಡಿಯೆಂಬ ಹೆಗ್ಗಳಿಕೆಗೆ ಗ್ಯಾಡೆಕಿ–ಪೀರ್ಸ್ ಪಾತ್ರರಾದರು.
ಫೈನಲ್‌ನಲ್ಲಿ ಮೊದಲ ಸೆಟ್ ಕಳೆದುಕೊಂಡರೂ, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಎರಡನೇ ಸೆಟ್‌ನಲ್ಲಿ ಬಲವಾದ ಪ್ರತಿರೋಧ ತೋರಿದ ಆಸ್ಟ್ರೇಲಿಯಾ ಜೋಡಿ, ಸೂಪರ್ ಟೈಬ್ರೇಕ್‌ನಲ್ಲಿ ಹಿಡಿತ ಸಾಧಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa