ಹೆಣ್ಣುಮಗು ಸಮಾಜದ ಸಿರಿ : ಆರ್. ಅಶೋಕ
ಬೆಂಗಳೂರು, 24 ಜನವರಿ (ಹಿ.ಸ.) : ಆ್ಯಂಕರ್ : ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಹೆಣ್ಣುಮಕ್ಕಳ ಮಹತ್ವವನ್ನು ಸಾರುವ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಹೆಣ್ಣು ಸಿರಿ ದೇವಿಯ ರೂಪ, ಮನೆಯ ಬೆಳಗುವ ನಂದಾದೀಪ. ಹೆಣ
Ashok


ಬೆಂಗಳೂರು, 24 ಜನವರಿ (ಹಿ.ಸ.) :

ಆ್ಯಂಕರ್ : ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಹೆಣ್ಣುಮಕ್ಕಳ ಮಹತ್ವವನ್ನು ಸಾರುವ ಸಂದೇಶವನ್ನು ಹಂಚಿಕೊಂಡಿದ್ದಾರೆ.

“ಹೆಣ್ಣು ಸಿರಿ ದೇವಿಯ ರೂಪ, ಮನೆಯ ಬೆಳಗುವ ನಂದಾದೀಪ. ಹೆಣ್ಣು ಮಗುವನ್ನು ಎಂದಿಗೂ ಮೊಳಕೆಯಲ್ಲೇ ಚಿವುಟಬಾರದು. ಪ್ರೀತಿ ಹಾಗೂ ಸವಿಯನ್ನು ಎರದು ಪೋಷಿಸಬೇಕು” ಎಂದು ಅವರು ತಮ್ಮ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

ಹೆಣ್ಣುಮಕ್ಕಳನ್ನು ಗೌರವಿಸಿ, ರಕ್ಷಿಸಿ, ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಕರೆ ನೀಡಿದರು.

ಈ ಮೂಲಕ ಆರ್. ಅಶೋಕ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande