
ವಿಜಯಪುರ, 23 ಜನವರಿ (ಹಿ.ಸ.) :
ಆ್ಯಂಕರ್ : ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಾಂತ ವೆಂಕಟೇಶ ಬೋಯ್ರ್, ಅಂಕುಶ ಸಾಹೇಬರಾವ್ ಜಾಧವ, ಗೋವರ್ಧನ ವಿಠ್ಠಲ ಪವಾರ, ರಜನಿ ಶಿವು ಬೋವಿ, ಮಂಜು ಪ್ರಶಾಂತ ಬೋಯ್ರ್ ಬಂಧಿತ ಆರೋಪಿಗಳು. ವಿಜಯಪೂರದಿಂದ ಮನಗೂಳಿಗೆ ಹೋಗುವ ಸಲುವಾಗಿ ವಿಜಯಪೂರದಿಂದ-ತಾಳಿಕೊಟೆಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ: ಕೆಎ-28/ಎಪ್-2198 ನೇದ್ದರಲ್ಲಿ ಹೋಗುವಾಗ ತಮ್ಮ ಹತ್ತಿರ ಇದ್ದ ಬ್ಯಾಗಿನಲ್ಲಿ ಸುಮಾರು 65 ಗ್ರಾಂ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗುವಾಗ ಮನಗೂಳಿ ಗ್ರಾಮದ ಹತ್ತಿರ ಬಸ್ಸಿನಲ್ಲಿ ಯಾರೋ ಆರೋಪಿತರು ಬ್ಯಾಗಿನಲ್ಲಿದ್ದ 65 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಆರೋಪಿತರನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾಗ ಮನಗೂಳಿ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ-50 ರ ಹತ್ತಿರ ಮುಳವಾಡ ಕ್ರಾಸ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದು, ಕೂಡಲೇ ತನಿಖಾ ತಂಡದವರು ಸದರಿಯವರಿಗೆ ಕಾರು ನಿಲ್ಲಿಸಲು ಸೂಚಿಸಿದರೂ ಸಹ ಕಾರನ್ನು ನಿಲ್ಲಿಸದೇ ಜೋರಾಗಿ ಹೋಗುತ್ತಿದ್ದರು, ಕೂಡಲೇ ಅವರನ್ನು ಹಿಂಬಾಲಿಸಿ ಕಾರನ್ನು ತಡೆದು ವಿಚಾರಿಸಲಾಗಿ ಸಂಶಯಾಸ್ಪದ ರೀತಿಯಲ್ಲಿ ಉತ್ತರವನ್ನು ನೀಡಿದ್ದರಿಂದ ಸದರಿಯವರಿಗೆ ಠಾಣೆಗೆ ಕರೆದುಕೊಂಡು ವಿಚಾರಿಸಿದ್ದಾಗ ಕಳ್ಳತನ ಬೆಳಕಿಗೆ ಬಂದಿದೆ. ಅದೇ ರೀತಿ ವಿಜಯಪುರ ಜಿಲ್ಲೆಯ ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಲಗುಂಬಜ್, ನಿಡಗುಂದಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 07 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಮೇಲ್ಕಂಡ ಆರೋಪಿತರನ್ನು ದಸ್ತಗೀರ ಮಾಡಿ ಇವರಿಂದ ಮನಗೂಳಿ, ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಲಗುಂಬಜ್, ಹಾಗೂ ನಿಡಗುಂದಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ಒಟ್ಟು 08 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ 01 ಕಾರು ಹಾಗೂ ಒಟ್ಟು 426.2 ಗ್ರಾಂ ಬಂಗಾರದ ಆಭರಣಗಳನ್ನು ಹೀಗೆ ಒಟ್ಟು ಅಂದಾಜು 65 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಅಲ್ಲದೇ, ಪ್ರಕರಣದ ತನಿಖೆ ಮುಂದುವರೆದಿದ್ದು, ಇನ್ನೂಳಿದ ಪರಾರಿ ಇರುವ ಆರೋಪಿತರು ಹಾಗೂ ಕಳುವಾದ ಮಾಲು ಪತ್ತೆ ಕಾರ್ಯ ಮುಂದುವರೆದಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande