ನಕಲಿ ಚಿನ್ನ ಮಾರಾಟ ಆರೋಪಿಗಳ ಬಂಧನ
ವಿಜಯಪುರ, 23 ಜನವರಿ (ಹಿ.ಸ.) : ಆ್ಯಂಕರ್ : ನಕಲಿ ಚಿನ್ನವನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷಲಾಲ ಮಾನಪ್ಪ ಕೊರಚರ, ರಾಜಾ ವೆಂಕಟೇಶ ಕಾವಾಡಿ, ಹರೀಶ
ನಕಲಿ ಚಿನ್ನ ಮಾರಾಟ ಆರೋಪಿಗಳ ಬಂಧನ


ವಿಜಯಪುರ, 23 ಜನವರಿ (ಹಿ.ಸ.) :

ಆ್ಯಂಕರ್ : ನಕಲಿ ಚಿನ್ನವನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷಲಾಲ ಮಾನಪ್ಪ ಕೊರಚರ, ರಾಜಾ ವೆಂಕಟೇಶ ಕಾವಾಡಿ, ಹರೀಶ ಚೌಡಪ್ಪ ಕೆ. ಕೊರಚರ, ಚಿರಂಜಿವಿ ದುರ್ಗಪ್ಪ ಕೆ. ಕೊರಚರ ಬಂಧಿತರು. ಇನ್ನು ಬಂಧಿತ ಆರೋಪಿಗಳು ಸದರಿ ಪ್ರಕರಣದಲ್ಲಿ ಮೋಸ ಮಾಡಿಕೊಂಡು ತೆಗೆದುಕೊಂಡ ಹಣವನ್ನು ಪತ್ತೆ ಕುರಿತು ಪೊಲೀಸ್ ಅಧೀಕ್ಷಕರು ವಿಜಯಪುರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಮಾರ್ಗದರ್ಶನದಲ್ಲಿ ಮನಗೂಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಒಳಗೊಂಡಂತೆ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ಆರೋಪಿತರ ಪತ್ತೆಯ ಬಗ್ಗೆ ಎಲ್ಲಾ ರೀತಿಯಲ್ಲಿಯೂ ಮಾಹಿತಿಯನ್ನು ಕಲೆಹಾಕಿ ಸದರಿ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಜನ ಆರೋಪಿತರನ್ನು ದಸ್ತಗೀರಿ ಮಾಡಿದ್ದಾರೆ. ಮೋಸ ಮಾಡಿ ತೆಗೆದುಕೊಂಡು ಹೋದ 20 ಲಕ್ಷ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ 01 ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande