
ವಿಜಯಪುರ, 23 ಜನವರಿ (ಹಿ.ಸ.) :
ಆ್ಯಂಕರ್ : ಅವಳಿ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬು ಬಸಗೊಂಡ ಜಮಖಂಡಿ ಬಂಧಿತ ಆರೋಪಿ. ಇನ್ನು ಆರೋಪಿ ಸದರಿ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ವೇಳೆಯಲ್ಲಿ ಮನಗೂಳಿ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ-50ರ ಹತ್ತಿರ ಮುಳವಾಡ ಕ್ರಾಸ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಒಬ್ಬನು ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದು ಕೂಡಲೇ ತನಿಖಾ ತಂಡದವರು ಸದರಿಯವನಿಗೆ ಮೋಟಾರ್ ಸೈಕಲ್ ನಿಲ್ಲಿಸಲು ಸೂಚಿಸಿದರೂ, ಸಹ ಮೋಟಾರ್ ಸೈಕಲನ್ನು ನಿಲ್ಲಿಸದೇ ಜೋರಾಗಿ ಹೋಗುತ್ತಿದ್ದು ಕೂಡಲೇ ಅವನನ್ನು ಹಿಂಬಾಲಿಸಿ ಮೋಟಾರ್ ಸೈಕಲನ್ನು ತಡೆದು ವಿಚಾರಿಸಲಾಗಿ ಸಂಶಯಾಸ್ಪದ ರೀತಿಯಲ್ಲಿ ಉತ್ತರ ನೀಡಿದ್ದನು. ಅದಕ್ಕಾಗಿ ವಶಕ್ಕೆ ಪಡೆದುಕೊಂಡ ವಿಚಾರಣೆ ಮಾಡಿದ್ದಾಗ ವಿಜಯಪುರ ಜಿಲ್ಲೆಯ ಆದರ್ಶನಗರ, ಗೋಲಗುಂಬಜ್, ಜಲನಗರ, ಬಾಗಲಕೋಟ ಜಿಲ್ಲೆಯ ಬಾಗಲಕೋಟ ಗ್ರಾಮೀಣ, ಕಲಾದಗಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 19 ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಸದರಿ ಆರೋಪಿತನು ಈ ಮೊದಲೇ ಮನಗೂಳಿ ಪೊಲೀಸ್ ಠಾಣೆಯ ಎಂಓಬಿ ಇರುತ್ತಾನೆ. 19 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು 5,30,000 ಲಕ್ಷ ರೂ. ಮೌಲ್ಯ ಇರುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande