
ಬೆಂಗಳೂರು, 22 ಜನವರಿ (ಹಿ.ಸ.):
ಆ್ಯಂಕರ್:
ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಕನ್ನಡ ಚಿತ್ರ ಕರಾವಳಿಯ ಮೊದಲ ರೊಮ್ಯಾಂಟಿಕ್ ಹಾಡು ‘ಮುದ್ದು ಗುಮ್ಮ… ಮುದ್ದು ಗುಮ್ಮ ನೀನೇನಾ…’ ಬಿಡುಗಡೆ ಆಗಿದ್ದು, ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟನೆಯ ಈ ಹಾಡು ಶ್ರೋತೃ ಹೃದಯ ಗೆದ್ದಿದೆ.
ಸಿದ್ ಶ್ರೀರಾಮ್ ಧ್ವನಿಯಲ್ಲಿ ಹಾಡು ಮೂಡಿ ಬಂದಿದ್ದು, ಸಂಗೀತವನ್ನು ಸಚಿನ್ ಬಸ್ರೂರು, ಸಾಹಿತ್ಯವನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಮೊದಲು ಬಿಡುಗಡೆಯಾದ ಟೀಸರ್ ಮತ್ತು ಪೋಸ್ಟರ್‌ಗಳು ಸಿನಿಮಾ ಮೇಲೆ ಹೆಚ್ಚಿನ ಕುತೂಹಲ ಮೂಡಿಸಿದ್ದವು.
‘ಕರಾವಳಿ’ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದು, ವಿಕೆ ಫಿಲ್ಮ್ಸ್ ಅಸೋಸಿಯೇಷನ್ ಮೂಲಕ ನಿರ್ಮಾಣವಾಗುತ್ತಿದೆ. ಚಿತ್ರವು ಮಾನವ–ಪ್ರಾಣಿ ಸಂಘರ್ಷದ ಕಥೆಯನ್ನು ಹಳ್ಳಿ ಹಿನ್ನೆಲೆಯೊಂದಿಗೆ ತೋರಿಸುತ್ತದೆ. ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್, ಸಂಪದಾ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ಯಾಮರಾ ವರ್ಕ್ ಅನ್ನು ಅಭಿಮನ್ಯೂ ಸದಾನಂದನ್ ನಿರ್ವಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa