ಗ್ರಾಮ‌ ಪಂಚಾಯತಿಗಳ ಪುನರ್‌ರಚಿಸಿ‌ ಅಧಿಸೂಚನೆ‌ : ಆಕ್ಷೇಪಣೆ ಆಹ್ವಾನ
ವಿಜಯಪುರ, 18 ಜನವರಿ (ಹಿ.ಸ.) : ಆ್ಯಂಕರ್ : ಸರ್ಕಾರದ ದಿನಾಂಕ:07.01.2026ರ ಪತ್ರದಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ 4ನೇ ಪ್ರಕರಣದ 2ನೇ ಉಪ ಪ್ರಕರಣದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ವಿಜಯಪುರ ತಾಲ್ಲೂಕಿನ ಐನಾಪೂರ ಗ್ರಾಮ‌ ಪಂಚ
ಗ್ರಾಮ‌ ಪಂಚಾಯತಿಗಳ ಪುನರ್‌ರಚಿಸಿ‌ ಅಧಿಸೂಚನೆ‌ : ಆಕ್ಷೇಪಣೆ ಆಹ್ವಾನ


ವಿಜಯಪುರ, 18 ಜನವರಿ (ಹಿ.ಸ.) :

ಆ್ಯಂಕರ್ : ಸರ್ಕಾರದ ದಿನಾಂಕ:07.01.2026ರ ಪತ್ರದಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ 4ನೇ ಪ್ರಕರಣದ 2ನೇ ಉಪ ಪ್ರಕರಣದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,

ವಿಜಯಪುರ ತಾಲ್ಲೂಕಿನ

ಐನಾಪೂರ ಗ್ರಾಮ‌ ಪಂಚಾಯತಿ ವ್ಯಾಪ್ತಿಗೆ ಐನಾಪೂರ ಹಾಗೂ ಬುರಣಾಪೂರ ಗ್ರಾಮಗಳನ್ನು ಮತ್ತು ಜುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಜುಮನಾಳ ಹಾಗೂ ಖತಿಜಾಪೂರ ಗ್ರಾಮಗಳನ್ನು ಒಳಪಡಿಸಿ, ಗ್ರಾಮ‌ ಪಂಚಾಯತಿಗಳನ್ನು ಪುನರ್ ರಚಿಸಿ,ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ್. ಕೆ. ಅವರು ಕರಡು ಅಧಿಸೂಚನೆ

ಹೊರಡಿಸಿದ್ದಾರೆ.

ಈ ಕರಡು ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:17-01-2026 ರಿಂದ 23-01-2026ರ ಒಳಗಾಗಿ ಅಂತಹ ಆಕ್ಷೇಪಣೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande