ಇಂಚಗೇರಿ ಹಾಗೂ ಯಂಕಂಚಿ ಜಾತ್ರೆ : ವಿಶೇಷ ಸಾರಿಗೆ ವ್ಯವಸ್ಥೆ
ವಿಜಯಪುರ, 18 ಜನವರಿ (ಹಿ.ಸ.) : ಆ್ಯಂಕರ್ : ಪ್ರತಿ ವರ್ಷದಂತೆ ನಡೆಯುವ ಇಂಡಿ ತಾಲೂಕಿನ ಇಂಚಗೇರಿಯಲ್ಲಿ ಶ್ರೀ ಬಾವುಸಾಹೇಬ ಮಹಾರಾಜರ ಸಪ್ತಾಹ ಹಾಗೂ ಸಿಂದಗಿ ತಾಲೂಕಿನ ಯಂಕಂಚಿಯ ಶ್ರೀ ದಾವಲಮಲೀಕ ಉರುಸು ದಿನಾಂಕ:21-01-2026 ರಿಂದ 26-01-2026ರವರೆಗೆ ನಡೆಯಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾ
ಇಂಚಗೇರಿ ಹಾಗೂ ಯಂಕಂಚಿ ಜಾತ್ರೆ : ವಿಶೇಷ ಸಾರಿಗೆ ವ್ಯವಸ್ಥೆ


ವಿಜಯಪುರ, 18 ಜನವರಿ (ಹಿ.ಸ.) :

ಆ್ಯಂಕರ್ : ಪ್ರತಿ ವರ್ಷದಂತೆ ನಡೆಯುವ ಇಂಡಿ ತಾಲೂಕಿನ ಇಂಚಗೇರಿಯಲ್ಲಿ ಶ್ರೀ ಬಾವುಸಾಹೇಬ ಮಹಾರಾಜರ ಸಪ್ತಾಹ ಹಾಗೂ ಸಿಂದಗಿ ತಾಲೂಕಿನ ಯಂಕಂಚಿಯ ಶ್ರೀ ದಾವಲಮಲೀಕ ಉರುಸು ದಿನಾಂಕ:21-01-2026 ರಿಂದ 26-01-2026ರವರೆಗೆ ನಡೆಯಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ವತಿಯಿಂದ ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಚಡಚಣ ಹಾಗೂ ಹೊರ್ತಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಯಾಣಿಕರು ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಘಟಕ–1 (7760992263), ವಿಜಯಪುರ ಘಟಕ–2 (7760992264), ಇಂಡಿ ಘಟಕ (7760992265), ಸಿಂದಗಿ ಘಟಕ (7760992266) ಹಾಗೂ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ನಿಲ್ದಾಣಾಧಿಕಾರಿ (7760992258) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande