ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದಿಂದ ಭೀಮಣ್ಣ ಖಂಡ್ರೆ ನಿಧನಕ್ಕೆ ಸಂತಾಪ
ಬೆಂಗಳೂರು, 17 ಜನವರಿ (ಹಿ.ಸ.) : ಆ್ಯಂಕರ್ : ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಹಿರಿಯ ಸಮಾಜಸೇವಕ ಹಾಗೂ ಮಾರ್ಗದರ್ಶಕರಾದ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ಲ್ಯಾಂಬೆತ್ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅವರು ನೀಡಿದ ಅಚಲ ಬೆಂಬಲ ಹಾಗೂ ಮಾರ್ಗದರ್ಶನ ಅಮೂಲ್ಯವಾಗಿದ್ದು, ಆ ಮ
Khandre


ಬೆಂಗಳೂರು, 17 ಜನವರಿ (ಹಿ.ಸ.) :

ಆ್ಯಂಕರ್ : ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಹಿರಿಯ ಸಮಾಜಸೇವಕ ಹಾಗೂ ಮಾರ್ಗದರ್ಶಕರಾದ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ಲ್ಯಾಂಬೆತ್ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅವರು ನೀಡಿದ ಅಚಲ ಬೆಂಬಲ ಹಾಗೂ ಮಾರ್ಗದರ್ಶನ ಅಮೂಲ್ಯವಾಗಿದ್ದು, ಆ ಮಹತ್ವದ ಕಾರ್ಯ ಯಶಸ್ವಿಯಾಗಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ದೂರದೃಷ್ಟಿ, ಸದ್ಭಾವನೆ ಮತ್ತು ಸೇವಾ ಮನೋಭಾವವನ್ನು ನಾವು ಸದಾ ಕೃತಜ್ಞತೆಯೊಂದಿಗೆ ಹಾಗೂ ಗೌರವದಿಂದ ಸ್ಮರಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಮಾಜಕ್ಕಾಗಿ ಸೇವೆ, ಬದ್ಧತೆ ಮತ್ತು ಮೌಲ್ಯಾಧಾರಿತ ಜೀವನದ ಸ್ಫೂರ್ತಿದಾಯಕ ಪರಂಪರೆಯನ್ನು ಅವರು ನಮ್ಮೊಳಗೆ ಉಳಿಸಿ ಹೋಗಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ.

ಅವರ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಅಪಾರ ಅಭಿಮಾನಿಗಳಿಗೆ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಪರವಾಗಿ ಸಂತಾಪಗಳನ್ನು ಸಲ್ಲಿಸುತ್ತೇವೆ.

ಪರಮಾತ್ಮರು ಅವರ ಉದಾತ್ತ ಆತ್ಮಕ್ಕೆ ಚಿರಶಾಂತಿ ನೀಡಲಿ ಪ್ರತಿಷ್ಠಾನ ಸಂತಾಪ ಸೂಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande