ಕೃಷಿ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭಕ್ಕೆ ತೀರ್ಮಾನ
ಕೊಪ್ಪಳ, 17 ಜನವರಿ (ಹಿ.ಸ.) : ಆ್ಯಂಕರ್ : ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಜನವರಿ 19 ರಿಂದ ಸೋಮವಾರ ಮತ್ತು ಗುರುವಾರ (ವಾರದಲ್ಲಿ 2 ದಿನ ಮಾತ್ರ) ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರ
ಕೃಷಿ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭಕ್ಕೆ ತೀರ್ಮಾನ


ಕೊಪ್ಪಳ, 17 ಜನವರಿ (ಹಿ.ಸ.) :

ಆ್ಯಂಕರ್ : ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಜನವರಿ 19 ರಿಂದ ಸೋಮವಾರ ಮತ್ತು ಗುರುವಾರ (ವಾರದಲ್ಲಿ 2 ದಿನ ಮಾತ್ರ) ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭಿಸಲು ತೀರ್ಮಾನಿಸಲಾಗಿರುತ್ತದೆ.

ನಿಗದಿತ ದಿನಗಳಂದು ಟೆಂಡರ್ ಪ್ರಕ್ರಿಯೆಯು ಬೆಳಗ್ಗೆ 10.30 ರಿಂದ 12.30 ಗಂಟೆವರೆಗೆ ಲಾಟ್ ಎಂಟ್ರಿ, ಮಧ್ಯಾಹ್ನ 12.30 ರಿಂದ 1.30 ಗಂಟೆವರೆಗೆ ಟೆಂಡರ್ ಹಾಕುವುದು ಮತ್ತು 1.30ರ ನಂತರ ಟೆಂಡರ್ ತೆರೆಯುವುದು ಅಥವಾ ಘೋಷಿಸಲಾಗುವುದು. ಆದ್ದರಿಂದ, ರೈತ ಬಾಂಧವರು ತಮ್ಮ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ತಂದು, ಮಾರಾಟ ಮಾಡುವ ಮೂಲಕ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಲು ಹಾಗೂ ಸಮಿತಿಯಿಂದ ಲೈಸನ್ಸ್ ಹೊಂದಿದ ದಲಾಲರು ಮತ್ತು ಕೃಷಿ ಮಾರಾಟ ಇಲಾಖೆಯಿಂದ ಲೈಸನ್ಸ್ ಹೊಂದಿದ ಖರೀದಿದಾರರು ಈ ಟೆಂಡರ್‍ನಲ್ಲಿ ಭಾಗವಹಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಯಶಸ್ವಿಗೊಳಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲಬುರ್ಗಾ ಕೇಂದ್ರ ಕಛೇರಿ ಕುಕನೂರಿನ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande