ಪುಸ್ತಕ ಆಯ್ಕೆ ಸಮಿತಿ ನೋಂದಣಿ
ಕೊಪ್ಪಳ, 17 ಜನವರಿ (ಹಿ.ಸ.) : ಆ್ಯಂಕರ್ : 2025ರಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಪುಸ್ತಕಗಳ ಆಯ್ಕೆಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಪುಸ್ತ್ತಕಗಳ ನೋಂದಣಿ ಕಾಯ್ದೆ ಅನ್ವಯ, ಪ್ರಕಾಶಕರು
ಪುಸ್ತಕ ಆಯ್ಕೆ ಸಮಿತಿ ನೋಂದಣಿ


ಕೊಪ್ಪಳ, 17 ಜನವರಿ (ಹಿ.ಸ.) :

ಆ್ಯಂಕರ್ : 2025ರಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಪುಸ್ತಕಗಳ ಆಯ್ಕೆಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಪುಸ್ತ್ತಕಗಳ ನೋಂದಣಿ ಕಾಯ್ದೆ ಅನ್ವಯ, ಪ್ರಕಾಶಕರು 2025ರಲ್ಲಿ ಮುದ್ರಿಸಿ ಪ್ರಕಟಿಸಿದ ಮೊದಲ ಆವೃತ್ತಿಯ ಪುಸ್ತಕಗಳ 3 ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಆಯ್ಕೆಗಾಗಿ ಸಲ್ಲಿಸಲಾದ 3 ಪ್ರತಿಗಳಲ್ಲಿ ಒಂದನ್ನು ಪರಿಗಣಿಸಲಾಗುತ್ತದೆ.

2025ರಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾμÉಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪ್ರತಿ ಶೀರ್ಷಿಕೆ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ 2026ರ ಜನವರಿ 31ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸಬೇಕು. ನೋಂದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ.

ಹೊರ ರಾಜ್ಯಗಳಲ್ಲಿ 2025ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾμÉಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಕೇಂದ್ರ/ ಆಯಾ ರಾಜ್ಯ ಸರ್ಕಾರಗಳಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ನೋಂದಣಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ಮತ್ತು ಆ ಪುಸ್ತಕದ ಒಂದು ಪ್ರತಿಯನ್ನು ಜನವರಿ 31ರ ಸಂಜೆ 5.30ರ ಒಳಗಾಗಿ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸುವ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.

ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾμÉಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದು.

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಕೆಲವು ನಿಬಂಧನೆಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಅದರಂತೆ ಪುಸ್ತಕಗಳು 2025ನೇ ವರ್ಷದಲ್ಲಿ ಪುಥಮ ಮುದ್ರಣವಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಅಥವಾ ಯಾವುದೇ ಪುಟಗಳಲ್ಲಿ ಮೊಹರು ಹಾಕಿರುವ, ವಿಳಾಸ ಕೈಬರಹ ಹೊಂದಿರುವ, ಸ್ಟಿಕ್ಕರ್ ಅಂಟಿಸಿರುವ ಯಾವುದೇ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ಪುಸ್ತಕದ ಶೀರ್ಷಿಕೆ, ಗಂಧರ್ಕದ ಹೆಸರು ಪ್ರಕಾಶಕರ ಹೆಸರು, ಸಂಪೂರ್ಣ ವಿಳಾಸ ಪ್ರಕಶಕರು ಹಾಗೂ ಮುದ್ರಕರ ವಿಳಾಸವನ್ನು ಮುದ್ರಿಸಿರಬೇಕು. ಪುಟ ಸಂಖ್ಯೆ ಪ್ರಕಟಣೆಯ ವರ್ಷ ಮುಖಬೆಲೆ, ಪುಸ್ತಕದ ಅಳತ ಮತ್ತು ಕಾಗದದ ಗುಣಮಟ್ಟದ ವಿವರಗಳನ್ನು ಸ್ಪಷ್ಟವಾಗಿ ತಾಂತ್ರಿಕ ಪುಟದಲ್ಲಿ ನಮೂದಿಸಿರಬೇಕು. ಇವುಗಳಲ್ಲಿ ತಾಂತ್ರಿಕ ಲೋಪದೋಷಗಳು ಇದ್ದಲ್ಲಿ ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಗೆ ಇರುತ್ತದೆ.

ಮೂವತ್ತೆರಡು ಪುಟಗಳಿಗಿಂತ ಕಡಿಮೆ ಪುಟಗಳಿರುವ (ಮಕ್ಕಳ ಹಾಗೂ ನವಸಾಕ್ಷರ ಪುಸ್ತಕಗಳನ್ನು ಹೊರತುಪಡಿಸಿ) ಹಾಗೂ ಸೆಂಟರ್ ಪಿನ್ನಿಂಗ್ ಮಾಡಿರುವ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ. ನ್ಯೂಸ್ ಪ್ರಿಂಟರ್ ಅಥವಾ ಅಗ್ಗದ ಕಾಗದದಲ್ಲಿ ಮುದ್ರಿಸಿರುವ ಪುಸ್ತಕಗಳನ್ನು ತಿರಸ್ಕರಿಸಲಾಗುವುದು. ನೋಂದಣಿಗಾಗಿ ಸಲ್ಲಿಸಿದ ಗ್ರಂಥಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಸರ್ಕಾರದ ಆದೇಶ ಸಂಖ್ಯೆ ಇಡಿ 283 ಎಲ್ ಐಬಿ 2009, ಬೆಂಗಳೂರು, ದಿನಾಂಕ: 14-06-2010 ಮತ್ತು ಸರ್ಕಾರದ ಆದೇಶ ಸಂಖ್ಯೆ: ಇಡಿ 234 ಎಲ್ ಐಬಿ 2015, ಬೆಂಗಳೂರು ದಿನಾಂಕ: 22-12-2017ರ ಆದೇಶಗಳಲ್ಲಿರುವ ಪುಸ್ತಕಗಳ ಅಳತೆ ಹಾಗೂ ಕಾಗದದ ಗುಣಮಟ್ಟ ಹೊಂದಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.

ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಿರುವ ನಿರ್ಧಿಷ್ಟತೆಗಳನ್ನು ಹೊಂದಿರದ ಯಾವುದೇ ಪುಸ್ತಕಗಳನ್ನು ತಿರಸ್ಕರಿಸುವ ಅಥವಾ ಅಂತಹ ಪುಸ್ತಕಗಳು ಆಗತ್ಯವನಿಸಿದಲ್ಲಿ ಆಯ್ಕೆ ಸಮಿತಿಯು ನಿರ್ಧರಿಸುವ ಮಾನದಂಡದ ಪಕಾರ ಬೆಲೆ ನಿಗದಿಪಡಿಸಿ ಆಯ್ಕೆ ಮಾಡುವ ಹಕ್ಕು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಇರುತ್ತದೆ. ಪುಸ್ತಕಗಳ ಆಯ್ಕೆ ಹಾಗೂ ಅವುಗಳ ಬೆಲೆ ನಿಗದಿ ವಿಷಯದಲ್ಲಿ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮನವಾಗಿರುತ್ತದೆ.

2025ನೇ ಸಾಲಿನಲ್ಲಿ ಪ್ರಕಟಗೊಂಡ ಪುಸ್ತಕಗಳ ಆಯ್ಕೆಗೆ ಪ್ರತ್ಯೇಕವಾಗಿ ಆಯುಕ್ತರ ಕಛೇರಿಯಲ್ಲಿ ಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಇಚ್ಛಿಸುವ ಲೇಖಕರು, ಲೇಖಕ ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಯವರು ನಿಗದಿತ ಅವಧಿಯೊಳಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ನೋಂದಣಿ ಅಧಿನಿಯಮದಡಿ ನಿಯಮಾನುಸಾರ ಪುಸ್ತಕಗಳನ್ನು ಸಲ್ಲಿಸಬೇಕು. ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಇಲಾಖಾ ಅಂತರ್ಜಾಲ ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಅಥವಾ ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು, ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿಗಳಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಆಯುಕ್ತರ ಕಛೇರಿ ದೂರವಾಣಿ ಸಂಖ್ಯೆ 080-22864990, 22867358 ಮತ್ತು ರಾಜ್ಯ ಕೇಂದ್ರ ಗ್ರಂಥಾಲಯದ ದೂರವಾಣಿ ಸಂಖ್ಯೆ 080-22212128 ಗೆ ಸಂಪರ್ಕಿಸಬಹುದು. ಕೊಪ್ಪಳ ಜಿಲ್ಲೆಯ ಲೇಖರ-ಪ್ರಕಾಶಕರು, ಪ್ರಕಾಶಕರು, ಪುಸ್ತಕ ಮಾರಾಟಗಾರರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande