ಕೆಜಿಎಫ್ ನಗರದಲ್ಲಿ ಸೌಹಾರ್ದತೆಯ ಸಂಕ್ರಾಂತಿ ಆಚರಣೆ
ಕೆಜಿಎಫ್ ನಗರದಲ್ಲಿ ಸೌಹಾರ್ಧತೆಯ ಸಂಕ್ರಾ0ತಿ ಆಚರಣೆ
ಕೆಜಿಎಫ್ ನಗರದಲ್ಲಿ ಗುರುವಾರ ಸಂಕ್ರಾ0ತಿ ಹಬ್ಬದ ಅಂಗವಾಗಿ ಮಹಿಳೆಯರು ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಹಂಚಿದರು.


ಕೋಲಾರ, ೧೫ ಜನವರಿ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಕೆಜಿಎಫ್ ನಗರವು ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಇಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷಿಗರು ದಶಕಗಳಿಂದಲೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಬಾರಿಯ ಸಂಕ್ರಾಂತಿ ಆಚರಣೆಯು ಈ ಬಹುಭಾಷಾ ಮತ್ತು ಬಹುಧರ್ಮೀಯ ಅಸ್ಮಿತೆಯನ್ನು ಎತ್ತಿ ಹಿಡಿದಿದೆ.

ಕೆಜಿಎಫ್ ನಗರದಲ್ಲಿ ಸಂಕ್ರಾಂತಿಯನ್ನು ಕೇವಲ ಒಂದು ಧರ್ಮದ ಹಬ್ಬವನ್ನಾಗಿ ಆಚರಿಸದೆ, ಇಡೀ ನಗರದ ಸೌಹಾರ್ದತೆ ಮತ್ತು ಐಕ್ಯತೆಯ ಸಂಕೇತವಾಗಿ ಆಚರಿಸಲಾಯಿತು.

ಬಹುಭಾಷಾ ಮತ್ತು ಧರ್ಮಿಯರು ಇರುವ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರಿಂದ ಆಚರಿಸಲಾಯಿತು.

ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಬಿಡಿಸಿ ಕಬ್ಬಿನ ಜಲ್ಲೆಗಳನ್ನು ಒಪ್ಪ ಓರಣವಾಗಿ ನಿಲ್ಲಿಸಿ ಮನೆಗಳ ಮುಂದೆ ಮಹಿಳೆಯರು ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಸಂಭ್ರಮಿಸಿದರು. ಇಡೀ ಕೆಜಿಎಫ್ ನಗರದಲ್ಲಿ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿತ್ತು.

ಸಾಮರಸ್ಯ ಮತ್ತು ಐಕ್ಯತೆಯ ಸಂಕೇತವಾಗಿ ಚರ್ಚುಗಳಲ್ಲಿಯೂ ಸಹ ಸಂಕ್ರಾಂತಿಯನ್ನು ಆಚರಿಸಿ ಶುಭಾಷಯ ಕೋರಲಾಯಿತು. ಸಾಮರಸ್ಯ ಮತ್ತು ವಿಶ್ವಮಾನವ ಸಂದೇಶ ಸಾರಿದ ತಮಿಳು ಸಾಹಿತ್ಯದ ವಿಶ್ವಕವಿ ಹಾಗೂ ಸಂತ ತಿರುವಳ್ಳೂರ್ ಪಲ್ಲಕ್ಕಿಯ ಮೆರವಣಿಗೆಯನ್ನು ಜಾನಪದ ಕಲಾ ತಂಡಗಳೊ0ದಿಗೆ ನಡೆಸಲಾಯಿತು.

ಕೆಜಿಎಫ್ ನಿವಾಸಿ ತಂಗವೇಲು ಜಾತಿ, ಧರ್ಮ ಭಾಷೆಯ ಗಡಿಗಳನ್ನು ಮೀರಿ ಸಂಕ್ರಾ0ತಿ ಸಂಕ್ರಾಂತಿಯನ್ನು ಸೌಹಾರ್ದತೆ ಮತ್ತು ಐಕ್ಯತೆಯ ಸಂಕೇತವಾಗಿ ಆಚರಿಸಲಾಯಿತು. ಎಲ್ಲಾ ಧರ್ಮಿಯರು ಸಂಕ್ರಾಂತಿ ಆಚರಣೆಯಲ್ಲಿ ಪಾಲ್ಗೊಂಡು ಸೌಹಾರ್ಧತೆಯನ್ನು ತೋರಿದರು ಎಂದು ತಿಳಿಸಿದರು.

ಕೆಜಿಎಫ್ ನಗರದ ಗಣಿ ಕಾರ್ಮಿಕರ ಕಾಲೋನಿಯ ನಿವಾಸಿ ಪೂಜ ಮನೆಮನೆಯಲ್ಲಿ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಿಸಲಾಯಿತು. ಅಕ್ಕಿ, ಬೆಲ್ಲದಿಂದ ಪೊಂಗಲ್ ತಯಾರಿಸಿ ಸಂಪ್ರದಾಯದ0ತೆ ಸಂಕ್ರಾಂತಿ ಪ್ರತಿವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಜಿಎಫ್ ಜೈನ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶ್ರೀನಿವಾಸ್ ಪ್ರಸಾದ್ ಮನೆ ಮಂದಿಯಲ್ಲಾ ಸಿಹಿ ಪೊಂಗಲ್ ತಯಾರಿಸಿ ಹಂಚಿ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಣಬಹುದಾಗಿದೆ. ಆಚರಣೆ ಸಮಗ್ರ ನಾಡಿನ ಐಕ್ಯತೆಯನ್ನು ಸೂಚಿಸುತ್ತದೆ. ಸಂಕ್ರಾಂತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಸಂಕ್ರಾಂತಿಯ ಭಾವ ಮತ್ತು ಸೊಗಡು ಒಂದೇ ಆಗಿದೆ. ಕೆಜಿಎಫ್ ನಗರದಲ್ಲಿ ತಮಿಳು ಭಾಷಿಕರ ಪ್ರಭಾವವಿದೆ. ಅವರು ಸಂಕ್ರಾಂತಿಯನ್ನು ಪೊಂಗಲ್ ಎಂಬುದಾಗಿ ಆಚರಿಸುತ್ತಾರೆ ಎಂದು ತಿಳಿಸಿದರು.

ಚಿತ್ರ : ಕೆಜಿಎಫ್ ನಗರದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರು ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಹಂಚಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande