
ಕೋಲಾರ ಜನವರಿ ೧೫ (ಹಿ.ಸ) :
ಆ್ಯಂಕರ್ : ಸೈನಿಕರು ದೇಶದ ಸ್ವಾತಂತ್ರ‍್ಯ ಹಾಗೂ ಸುರಕ್ಷಿತಕ್ಕಾಗಿ ಹಗಲಿರುಳು ಪರಿಶ್ರಮಿಸಿ ದೇಶದ ಕವಚವಾಗಿದ್ದಾರೆ ಎಂದು ನಿವೃತ್ತ ಯೋಧರಾದ ಸುಭೇದಾರ್ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು
ನಗರದ ಮಕ್ಕಳ ಉದ್ಯಾನವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾAತಿ ಸಂಭ್ರಮ ಹಾಗೂ ರಾಷ್ಟ್ರೀಯ ಸೈನಿಕ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸುಭೇದಾರ್ ರಾಮಕೇಷ್ಣಪ್ಪ ರವರು ಬಾಲ್ಯದಲ್ಲಿ ತಂದೆಯ ಮುಖವನ್ನು ನೋಡಿಲ್ಲ. ತಾಯಿಯ ಆಶೀರ್ವಾದದಿಂದ ಬೆಳೆದು ಹತ್ತನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಅನೇಕ ಕಷ್ಟಗಳನ್ನು ಅನುಭವಿಸಿ ಎಂವಿಜಿ ಸೆಂಟರ್‌ನಲ್ಲಿ ಆರ್ಮಿಯಲ್ಲಿ ಸೇರಿಕೊಂಡು ತರಬೇತಿ ಸಂದರ್ಭದಲ್ಲಿ ತುಂಬಾ ನೋವುಗಳನ್ನು ಎದುರಿಸಿ ಒಬ್ಬಂಟಿಗನಾಗಿ ಎದುರಿಸಿ, ಜಮ್ಮು ಕಾಶ್ಮೀರ, ಶ್ರೀಲಂಕಾ, ಉತ್ತರಪ್ರದೇಶ ಮುಂತಾದ ಪ್ರದೇಶಗಳಲ್ಲಿ ನಿರಂತರವಾಗಿ ೨೪ ವರ್ಷಗಳ ಕಾಲ ಸೈನಿಕ ವೃತ್ತಿಯನ್ನು ಮಾಡಿ ಇಂದು ನಿವೃತ್ತಿಯಾದ ಸಂದರ್ಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದರು.
ಅತಿಥಿಗಳಾದ ನಿವೃತ್ತ ಶಿಕ್ಷಣಾಧಿಕಾರಿಗಳಾದ ಸಿ.ಆರ್ ಅಶೋಕ್ ರವರು ಮಾತನಾಡಿ ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ನಿಃಸ್ವಾರ್ಥ ಸೇವೆ ಸಲ್ಲಿಸುತ್ತಾರೆ; ಅವರ ಶಿಸ್ತು, ತ್ಯಾಗ, ಧೈರ್ಯ ಮತ್ತು ದೇಶಭಕ್ತಿ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡುತ್ತದೆ, ಸೈನಿಕರು ಯಾವುದೇ ಸವಾಲನ್ನು ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷರಾದ ಜಿ ಶ್ರೀನಿವಾಸ್ ಮಾತಾನಾಡಿ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಿರುತ್ತಾರೆ. ಅವರ ಕುಟುಂಬಗಳು ಸಹ ಈ ತ್ಯಾಗದಲ್ಲಿ ಭಾಗಿಯಾಗಿವೆ.
ಅತ್ಯುನ್ನತ ಮಟ್ಟದ ಶಿಸ್ತು, ಸಮರ್ಪಣೆ ಮತ್ತು ಅಚಲ ಧೈರ್ಯವನ್ನು ಹೊಂದಿರುತ್ತಾರೆ ಎಂದರು.
ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುಬ್ಬರಾಮಯ್ಯ ಮಾತಾನಾಡಿ ಮಕರ ಸಂಕ್ರಾAತಿಯAದು ಗೌರವ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸಾಧನೆ ಮಾಡಿದ ಯೋಧರನ್ನು ಗುರುತಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳುತ್ತಾ ಸೂರ್ಯನು ತನ್ನ ಪಥವನ್ನು ಬದಲಾಯಿಸುವಂತೆ ಈ ದೇಶದ ಜನರು ತಮ್ಮ ಬದುಕಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕೆಂದು.
ಜಿಲ್ಲಾಧ್ಯಕ್ಷ ಪಿ ನಾರಾಯಣಪ್ಪ ಮಾತಾನಾಡಿ ರಾಷ್ಟ್ರೀಯ ಸೇನಾ ದಿನಾಚರಣೆಯನ್ನು ೧೯೪೯ ಜನವರಿ,_೧೫ ರಂದು ನಮ್ಮ ನಾಡಿನ ಮತ್ತು ದೇಶದ ಹೆಮ್ಮೆಯ ಪುತ್ರರಾದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ದೇಶದ ಮೊದಲನೆಯ ಭಾರತೀಯ ದಂಡನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಂದಿನ ದಿನವನ್ನು ರಾಷ್ಟ್ರೀಯ ಸೇನಾ ದಿನವನ್ನಾಗಿ ಆಚರಿಸುತ್ತಾರೆ. ನಮ್ಮ ಭಾರತ ದೇಶದಲ್ಲಿ ಫೀಲ್ಡ್ ಮಾರ್ಷಲ್ ಪದವಿಯನ್ನು ಕೇವಲ ಇಬ್ಬರಿಗೆ ಮಾತ್ರ ಕೊಟ್ಟಿರುತ್ತಾರೆ. ಮೊದಲನೆಯದಾಗಿ ಮಾಣಿಕ್ಯ ಷಾ ಎರಡನೆಯದಾಗ ಕಾರ್ಯಪ್ಪ. ನಮ್ಮ ದೇಶ ಮತ್ತು ನಾಡು ಕಂಡAತ ನಾಯಕರಾಗಿರುವಂತಹ ಜನರಲ್ ಕಾರ್ಯಪ್ಪ ಮತ್ತು ತಿಮ್ಮಯ್ಯನವರು ನಮ್ಮ ದೇಶದ ಹೆಮ್ಮೆಯ ಪುತ್ರರು ಎಂದರು.
ರೋಟರಿ ಜೋನ್ ಸೆಕ್ರಟರಿ ಬಿ ಶಿವಕುಮಾರ್ ಮಾತಾನಾಡಿ ಸೈನಿಕರು ಭಾರತದ ಕಣ್ಣು, ಕೈ ಮತ್ತು ಕವಚದಂತಿದ್ದಾರೆ. ಅವರ ಶೌರ್ಯ, ತ್ಯಾಗ ಮತ್ತು ನಿರಂತರ ಸೇವೆಯು ದೇಶದ ಸ್ವಾತಂತ್ರ‍್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದರು.
ಬೆಮೆಲ್ ಶ್ರೀನಿವಾಸ್ ಮಾತಾನಾಡಿ ಸೈನಿಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ನಮ್ಮೆಲ್ಲರ ರಕ್ಷಣೆಗಾಗಿ ಹೋರಾಡುವ ಈ ವೀರರಿಗೆ ನಾವು ಎಂದಿಗೂ ಋಣಿಯಾಗಿರಬೇಕು ಎಂದರು
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಗೋಪಾಲರೆಡ್ಡಿ, ಎಸ್. ಸಿ ವೆಂಕಟಕೃಷ್ಣಪ್ಪ, ಡಾ. ಶರಣಪ್ಪ ಗಬ್ಬೂರು, ವೇಣುಸುಂದರಗೌಡ, ಸುಪ್ರೀಂ, ಯೋಧರಾದ ಜನಾರ್ದನ ಶ್ರೀಧರ್, ಸುಬೇದರ್ ವೆಂಕಟೇಶ್, ಮುಂತಾದವರು ಭಾಗವಹಿಸಿದ್ದರು.
ಚಿತ್ರ: ಕೋಲಾರ ನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರೀಯ ಸೈನಿಕ ದಿನಾಚರಣೆ ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್