ಕೋಲಾರ, 0೩ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಭಿನಂದಿಸಿದರು.
ಶಾಲೆಯ ಆವರಣದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದ ಅವರು, ಕ್ರೀಡೆಗಳೂ ಸಹಾ ಸಮಗ್ರ ಶಿಕ್ಷಣದ ಭಾಗವಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಲೀಲಾ ಮಾರ್ಗದರ್ಶನದಲ್ಲಿ ಶಾಲೆಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲೂ ಮಕ್ಕಳು ಉತ್ತಮ ಸಾಧನೆ ಮಾಡಿ, ಶಾಲೆಯ ಕೀರ್ತಿ ಹೆಚ್ಚಿಸಿ ಎಂದು ಕಿವಿಮಾತು ಹೇಳಿದ ಅವರು, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದರೆ ಉನ್ನತ ಶಿಕ್ಷಣಕ್ಕೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಸಿಗಲಿದೆ ಎಂದು ತಿಳಿಸಿದರು.
ಬಾಲಕರ ವಿಭಾಗದ ೧೦೦ ಮೀ ಓಟದಲ್ಲಿ ಸಂಜಯ್ ಪ್ರಥಮ, ೮೦೦ಮೀ ಓಟದಲ್ಲಿ ಶಾಲೆಯ ಮಂಜುನಾಥ್ ಪ್ರಥಮ ಹಾಗೂ ನಟರಾಜ್ ದ್ವಿತೀಯ ಸ್ತಾನ ಪಡೆದುಕೊಂಡರು. ಅದೇ ರೀತಿ ೧೫೦೦ ಮೀ ಓಟದಲ್ಲೂ ಶಾಲೆಯ ಮಂಜುನಾಥ್, ನಟರಾಜ್ ಕ್ರಮವಾಗಿ ಪ್ರಥಮ,ದ್ವಿತೀಯ ಸ್ಥಾನ ಪಡೆದುಕೊಂಡರು.
೧೦೦ ಮೀಟರ್ ರಿಲೆ, ೪೦೦ ಮೀಟರ್ ರಿಲೆ ಯಲ್ಲಿಯೂ ಶಾಲೆಯ ಮಕ್ಕಳು ಬಹುಮಾನ ತಮ್ಮದಾಗಿಸಿಕೊಂಡಿದ್ದು, ಹರ್ಡಲ್ಸ್ನಲ್ಲಿ ಶಾಲೆಯ ಮನೋಜ್ಕುಮಾರ್ ಪ್ರಥಮ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಸಾಯಿ ತೇಜಸ್ ತೃತೀಯ, ಚಕ್ರ ಎಸೆತದಲ್ಲಿ ಸಂಜಯ್ ದ್ವಿತೀಯ ಹಾಗಗೂ ಸಾಯಿ ತೇಜಸ್ ತೃತೀಯ ಸ್ಥಾನ ಪಡೆದುಕೊಂಡರು.
ಭರ್ಜಿ ಎಸೆತದಲ್ಲಿ ಧನುಷ್ ಕುಮಾರ್ ತೃತೀಯ, ಉದ್ದ ಜಿಗಿತದಲ್ಲಿ ನಿಖಿಲ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಎತ್ತರ ಜಿಗಿತದಲ್ಲಿ ಸುಹಾಸ್ಗೆ ತೃತೀಯ ಸ್ಥಾನ, ತ್ರಿವಿಧ ಜಿಗಿತದಲ್ಲಿ ಟರಾಜ್ಗೆ ದ್ವಿತೀಯ ಸ್ಥಾನ, ಅಂಜನಾದ್ರಿ ತೃತೀಯ ಸ್ಥಾನ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಎತ್ತರಜಿಗಿತದಲ್ಲಿ ನವ್ಯಶ್ರೀ ದ್ವಿತೀಯ ಸ್ಥಾನ, ೧೦೦ ಮೀಟರ್ ಹರ್ಡಲ್ಸ್ನಲ್ಲಿ ದೀಪ್ತೀಶ್ರೀ ದ್ವಿತೀಯ ಮಾಲತಿ ತೃತೀಯ ಸ್ಥಾನ ಪಡೆದುಕೊಂಡರು. ಭರ್ಜಿ ಎಸೆತದಲ್ಲಿ ಅಮೃತ ಪ್ರಥಮ ಸ್ಥಾನ, ಗುಂಡು ಎಡೆತದಲ್ಲಿ ಪೂಜಿತಾಗೆ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ಕಾವೇರಿ ತೃತೀಯ ಸ್ಥಾನ ಪಡೆದುಕೊಂಡರು.
ಮಕ್ಕಳೊಂದಿಗೆ ಕ್ರೀಡಾಕೂಟಕ್ಕೆ ವ್ಯವಸ್ಥಾಪಕರಾಗಿ ಶಿಕ್ಷಕರಾದ ಸುಗುಣಾ, ಆರ್.ವೆಂಕಟರೆಡ್ಡಿ ತೆರಳಿದ್ದರು. ಈ ಸಾಧನೆಯ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ ಮಕ್ಕಳನ್ನು ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ ಅಭಿನಂದಿಸಿದರು.
ಚಿತ್ರ : ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್