ಜಮ್ಮು, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು-ಕಾಶ್ಮೀರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಉತ್ತರ ರೈಲ್ವೆ ಇಲಾಖೆಯು ಸೆಪ್ಟೆಂಬರ್ 30ರವರೆಗೆ ಜಮ್ಮು ಹಾಗೂ ಕತ್ರಾ ನಿಲ್ದಾಣಗಳ ನಡುವೆ ಸಂಚರಿಸುವ 68 ರೈಲುಗಳನ್ನು ರದ್ದುಗೊಳಿಸಿದ್ದು, ಆದರೆ, ಪ್ರಯಾಣಿಕರ ತೊಂದರೆಯನ್ನು ಕಡಿಮೆ ಮಾಡಲು 24 ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ.
ಆಗಸ್ಟ್ 26ರಿಂದ ಭಾರೀ ಮಳೆಗೆ ಜಮ್ಮು ಪ್ರದೇಶ ತತ್ತರಿಸಿದೆ. ಪಠಾಣ್‌ಕೋಟ್–ಜಮ್ಮು ವಿಭಾಗದಲ್ಲಿ ನೀರು ತುಂಬಿ ಎಂಟು ದಿನಗಳಿಂದ ರೈಲು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರೈಲ್ವೆ ಮೂಲಗಳ ಪ್ರಕಾರ, 1910ರಿಂದ ಇಂದಿನವರೆಗೂ ಜಮ್ಮುವಿನಲ್ಲಿ ಅತಿ ಹೆಚ್ಚು ಮಳೆಯಾದ 380 ಮಿಮೀ ಮಳೆ ದಾಖಲಾಗಿದೆ.
ಪ್ರಯಾಣಿಕರ ತೊಂದರೆಯನ್ನು ತಗ್ಗಿಸಲು ಜಮ್ಮು–ಕತ್ರಾ ನಡುವೆ ಹೆಚ್ಚುವರಿ ಶಟಲ್ ಸೇವೆಗಳು ಪ್ರಾರಂಭಿಸಲಾಗಿದೆ. ಈಗಾಗಲೇ 7 ವಿಶೇಷ ರೈಲುಗಳ ಮೂಲಕ 5,784 ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ಕಳುಹಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa