ಸಿದ್ದರಾಮಯ್ಯ ವಿರುದ್ಧ ಯತ್ನಾಳ ಕಿಡಿ
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಜಾತಿ ಗಣತಿ ಸೋನಿಯಾ ಗಾಂಧಿ ಅಣಿತಿಯಂತೆ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್, ಒಕ್ಕಲಿಗ ಮಾಡಿದ್ದಾರೆ
ಯತ್ನಾಳ


ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಜಾತಿ ಗಣತಿ ಸೋನಿಯಾ ಗಾಂಧಿ ಅಣಿತಿಯಂತೆ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್, ಒಕ್ಕಲಿಗ ಮಾಡಿದ್ದಾರೆ. ಇವೆಲ್ಲ ಸೋನಿಯಾ ಗಾಂಧಿ ಕೊಟ್ಟಿರುವ ಹೊಸ ಹೊಸ ನಾಮಗಳು.ಕೆಲವರು ಕ್ರಿಶ್ಚಿಯನ್ ರಾಷ್ಟ್ರ, ಕೆಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆನ್ನುತ್ತಾರೆ. ಈ ಹಿನ್ನಲೆ ಜಾತಿ ವರ್ಗೀಕರಣ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇವೆಲ್ಲ ಜಾತಿಗಳು ನಮ್ಮ ದೇಶದಲ್ಲಿ, ವಿಶ್ವದಲ್ಲೇ ಇಲ್ಲ. ಸೋನಿಯಾ ಗಾಂಧಿ ನಿರ್ದೇಶನದ ಮೇಲೆ ಸಿಎಂ ಸಿದ್ದರಾಮಯ್ಯ ಕೀಳು ಮಟ್ಟದ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತು ಅವರದ್ದೆ ಸಚಿವ ಸಂಪುಟದಲ್ಲಿ ಗೊಂದಲವಾಗಿದೆ. ಸಿದ್ದರಾಮಯ್ಯನವರು ಇದೆಲ್ಲಾ ಕೈಬಿಡಬೇಕು. ಜಾತಿ ಗಣತಿ ಮಾಡುವುದಕ್ಕೆ ರಾಜ್ಯಕ್ಕೆ ಅಧಿಕಾರ ಇಲ್ಲ. ಕೇಂದ್ರಕ್ಕೆ ಇದೆ. ಇನ್ನೂ

ಲಿಂಗಾಯತ ಕಡಿಮೆ ಒಕ್ಕಲಿಗ ಕಡಿಮೆ ಇದ್ದಾರೆ. ಮುಸ್ಲಿಂಮರು ಹೆಚ್ಚಿದ್ದಾರೆ ಎಂದು ತೋರಿಸುವ ನಾಟಕವಿದು ಎಂದರು. ಬೂಕರ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದರಸಾ ಉದ್ಘಾಟನೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರ ಇದು ಧಾರ್ಮಿಕ ಮನೋಭಾವನೆಗೆ ಸಂಬಂಧಿಸಿದ್ದು, ಕೋರ್ಟ್‌ಗೆ ಹೋಗಿದ್ದು ತಪ್ಪು. ಕೋರ್ಟಿನಲ್ಲಿ ಪ್ರಶ್ನೆ ಮಾಡಬಾರದಾಗಿತ್ತು ಎಂದು ಯತ್ನಾಳ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande