ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಾಳೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಡುವುದೇ ತಪ್ಪು ಎಂದು ಸಚಿವ ಎಂಬಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಅಮಾನುಷವಾಗಿ ನಮ್ಮ ಜನರನ್ನು ಪಾಕಿಸ್ತಾನದವರು ಹತ್ಯೆ ಮಾಡಿದ್ದಾರೆ. ಅದಕ್ಕಾಗಿ ಪಾಕಿಸ್ತಾನದ ಜೊತೆಗೆ ನಮ್ಮ ಸಂಬಂಧ ಕಟ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.
ಭಾರತ, ಪಾಕಿಸ್ತಾನಕ್ಕೆ ಪಂದ್ಯಕ್ಕೆ ನಮ್ಮ ಪ್ರಭಲ ವಿರೋಧ ಇದೆ. ಗೆಲುವು, ಸೋಲುವುದು ಎರಡನೇ ಮಾತು. ಇವರ ಜೊತೆಗೆ ಪಂದ್ಯ ಆಡೋದು ಏಕೆ..? ಎಂದರು.
ಕಾಶ್ಮೀರದಲ್ಲಿ ನಮ್ಮ ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಕುಟುಂಬದವರಿಗೆ ನೋವು ಆಗೋದಿಲ್ವಾ. ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡುವುದೇ ತಪ್ಪು ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande