ಭೀಕರ ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ಭಾರತದ ನೆರವು
ಕಾಬೂಲ್, 2 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಫ್ಘಾನಿಸ್ತಾನದ ಕುನಾರ್‌ನಲ್ಲಿ ಭಾನುವಾರ ತಡರಾತ್ರಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಭೀಕರ ವಿನಾಶ ಉಂಟಾಗಿದೆ. ಇದುವರೆಗೆ 812 ಮಂದಿ ಸಾವನ್ನಪ್ಪಿ, 2,817 ಮಂದಿ ಗಾಯಗೊಂಡಿದ್ದಾರೆ. ಅನೆಕ ಗ್ರಾಮಗಳು ಮಣ್ಣಿನಡಿ ಹೂತುಹೋಗಿದ್ದು, ನುರ್ಗಲ್, ಸಾವ್ಕಿ, ವಾಟ್
Earthquake


ಕಾಬೂಲ್, 2 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಫ್ಘಾನಿಸ್ತಾನದ ಕುನಾರ್‌ನಲ್ಲಿ ಭಾನುವಾರ ತಡರಾತ್ರಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಭೀಕರ ವಿನಾಶ ಉಂಟಾಗಿದೆ. ಇದುವರೆಗೆ 812 ಮಂದಿ ಸಾವನ್ನಪ್ಪಿ, 2,817 ಮಂದಿ ಗಾಯಗೊಂಡಿದ್ದಾರೆ.

ಅನೆಕ ಗ್ರಾಮಗಳು ಮಣ್ಣಿನಡಿ ಹೂತುಹೋಗಿದ್ದು, ನುರ್ಗಲ್, ಸಾವ್ಕಿ, ವಾಟ್ಪುರ್, ಮನೋಗಿ, ಚೌಕೆ, ಚಾಪಾ ದಾರಾ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ನಿರಂತರ ಮಳೆ ಹಾಗೂ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ.

ಭಾರತವು 1,000 ಕುಟುಂಬ ಡೇರೆಗಳು ಮತ್ತು 15 ಟನ್ ಆಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಚೀನಾ ಸಹ ನೆರವು ನೀಡಲು ಭರವಸೆ ನೀಡಿದೆ. ಅಫ್ಘಾನ್ ಸರ್ಕಾರ ತಕ್ಷಣದ ನೆರವಿಗಾಗಿ $1.46 ಮಿಲಿಯನ್ ಬಿಡುಗಡೆ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande