ಟಿಯಾಂಜಿನ್, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ದ್ವಿಪಕ್ಷೀಯ ಸಭೆಗಾಗಿ ಒಂದೇ ವಾಹನದಲ್ಲಿ ಪ್ರಯಾಣ ಬೆಳೆಸಿದರು.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಶೃಂಗಸಭೆಗಳ ಬಳಿಕ ಪ್ರತಿ ದೇಶದ ನಾಯಕರು ಪ್ರತ್ಯೇಕ ವಾಹನಗಳಲ್ಲಿ ಸಭಾ ಸ್ಥಳಕ್ಕೆ ತೆರಳುವ ಪರಿಪಾಟು ಇದ್ದರೂ, ಈ ಬಾರಿ ಇಬ್ಬರು ಶಕ್ತಿಶಾಲಿ ನಾಯಕರು ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದುದು ವಿಶೇಷ ಗಮನ ಸೆಳೆದಿದೆ.
ಇಬ್ಬರು ನಾಯಕರು ಒಂದೇ ವಾಹನದಲ್ಲಿ ಪ್ರಯಾಣಿಸಿದ ಈ ಕ್ಷಣವು ಭಾರತ–ರಷ್ಯಾ ಸ್ನೇಹದ ಆತ್ಮೀಯತೆ, ಪರಸ್ಪರ ವಿಶ್ವಾಸ ಹಾಗೂ ತಾಂತ್ರಿಕ–ಆರ್ಥಿಕ ಸಹಕಾರದ ದೃಢತೆಯನ್ನು ತೋರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೋದಿ–ಪುಟಿನ್ ದ್ವಿಪಕ್ಷೀಯ ಮಾತುಕತೆಯಲ್ಲಿ ಜಾಗತಿಕ ಭದ್ರತೆ, ರಕ್ಷಣಾ ಕ್ಷೇತ್ರ, ಇಂಧನ ಸಹಕಾರ ಹಾಗೂ ಆರ್ಥಿಕ–ವಾಣಿಜ್ಯ ಸಂಬಂಧಗಳ ಬಲಪಡಿಸುವ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa