ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ : ಅಮ್ಜದ್ ಪಟೇಲ್
ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಡಿ ವಿಶ್ವವನ್ನೆ ಸೃಷ್ಟಿ ಮಾಡಿದ್ದು ಈಶ್ವರ ಆದರೆ ದೇವಲೊಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡಿದ್ದು ವಿಶ್ವಕರ್ಮ. ಹಾಗಾಗಿ ಪುರಾಣ ಕಾಲದಿಂದಲು ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ನಗರ ಸಭೆ ಅಧ್ಯಕ್ಷರಾದ ಅ
ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ : ಅಮ್ಜದ್ ಪಟೇಲ್


ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಡಿ ವಿಶ್ವವನ್ನೆ ಸೃಷ್ಟಿ ಮಾಡಿದ್ದು ಈಶ್ವರ ಆದರೆ ದೇವಲೊಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡಿದ್ದು ವಿಶ್ವಕರ್ಮ. ಹಾಗಾಗಿ ಪುರಾಣ ಕಾಲದಿಂದಲು ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ನಗರ ಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದ್ದಾರೆ.

ಅವರು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೂ ಪುರಾಣಗಳಲ್ಲಿ ಭಗವಾನ್ ವಿಶ್ವಕರ್ಮನನ್ನು ಸ್ವರ್ಗ ಮತ್ತು ಭೂಮಿಯನ್ನು ಸೃಷ್ಟಿಸಿದ ದೈವಿಕ ವಾಸ್ತುಶಿಲ್ಪಿ ಎಂದು ಪೂಜಿಸಲಾಗುತ್ತದೆ. ದೇವರುಗಳ ಅರಮನೆಗಳು, ವಿವಿಧ ದೈವಿಕ ಆಯುಧಗಳು ಮತ್ತು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಮಹತ್ವದ ವಾಸ್ತುಶಿಲ್ಪದ ಅದ್ಭುತಗಳನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ದ್ವಾರಕಾ ಮತ್ತು ಹಸ್ತಿನಾಪುರದ ಪೌರಾಣಿಕ ನಗರಗಳು ಹಾಗೂ ದೇವರುಗಳ ಪೌರಾಣಿಕ ಹಾರುವ ರಥಗಳು ವಿಶ್ವಕರ್ಮರ ಸೃಷ್ಟಿಗಳಾಗಿವೆ ಎಂದು ಹೇಳಿದರು.

ಇಡೀ ಜಗತ್ತಿನಲ್ಲಿ ಎಲ್ಲೆ ಹೋದರು ನಮ್ಮ ಕಣ್ಣಿಗೆ ಕಾಣುವ ವಾಸ್ತುಶಿಲ್ಪ ಕಲೆ ಮತ್ತು ಕೆತ್ತನೆ ಕಾರ್ಯಗಳ ಹಿಂದೆ ವಿಶ್ವಕರ್ಮರನ್ನು ಕಾಣಬಹುದು. ಒಂದು ಕಲ್ಲನ್ನು ಮೃದು ಮಾಡಿ ಅದಕ್ಕೆ ಒಂದು ರೂಪ ನೀಡುವವರು ವಿಶ್ವಕರ್ಮರು ಅಂತಹ ಅನೇಕ ಕೆತ್ತನೆಗಳನ್ನು ನಾವೂ ಭಾರತದಾದ್ಯಂತ ಕಾಣಬಹುದಾಗಿದೆ. ಅದೆ ರೀತಿಯಲ್ಲಿ ಸಮಾಜದಲ್ಲಿನ ಪ್ರತಿಯೊಬ್ಬರ ಮನಸ್ಸನ್ನು ಕೆತ್ತಿ, ಮೃದು ಮಾಡಿ ಪ್ರೀತಿ ವಿಶ್ವಾಸಗಳಿಸುವ ಕಾರ್ಯ ಮಾಡುವ ಸಮಾಜ ಅಂದರೆ ಅದು ನಮ್ಮ ವಿಶ್ವಕರ್ಮ ಸಮಾಜ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು ಮಾತನಾಡಿ ನಾವು ಇಲ್ಲಿ ಕೂತು ಮಾತನಾಡುತ್ತಿದ್ದೇವೆ ಎಂದರೆ ವಿಶ್ವಕರ್ಮರ ಪಾತ್ರ ಬಹಳಷ್ಟು ಅಗಾಧ ವಾಗಿದೆ. ಇ ಜಗತ್ತು ಸುಂದರವಾಗಿ ಕಾಣಲು, ನಾವು ಯಾವುದೇ ಕಟ್ಟಡದ ವಾಸ್ತುಶಿಲ್ಪ ವನ್ನು ನೋಡಿದಾಗ ಅದು ನಮ್ಮ ಕಣ್ಮನ ಸೆಳೆಯುತ್ತದೆ. ಅದಕ್ಕೆ ವಿಶ್ವಕರ್ಮರ ಕೊಡುಗೆ ಸಾಧನೆ ಯನ್ನು ನಾವೆಲ್ಲರೂ ಮನಗಾಣಬೇಕು ಎಂದರು.

ಭೂಮಿ ಮೇಲೆನ ಮಣ್ಣಿನಿಂದ ಹಿಡಿದು ಎಲ್ಲಾ ವಸ್ತುಗಳಿಗೆ ಒಂದು ವಿಶೇಷವಾದ ರೂಪ ಕೊಟ್ಟ ಮನಸ್ಸಿಗೆ ಮೃದು ನೀಡುವ ರೀತಿಯ ಸೃಷ್ಟಿಗೆ ಕಾರಣಿಭೂತರಾದವರು ಯಾರಾದರು ಇದ್ದರೆ ಅದು ನಮ್ಮ ವಿಶ್ವಕರ್ಮರು ಎಂದು ಹೇಳಿದರು ತಪ್ಪಾಗುವುದಿಲ್ಲ. ವಿಶ್ವಕರ್ಮರ ಜ್ಞಾನ, ತಾಳ್ಮೆ ಮತ್ತು ವಿಚಾರ ಶಕ್ತಿ, ಎಷ್ಟು ಅಗಾಧ ವಾಗಿತ್ತು. ಅವರಂತೆ ವಿಶ್ವಕರ್ಮ ಸಮಾಜದ ನಾವೆಲ್ಲರೂ ಅವರ ಜ್ಞಾನದ ಸಂಪತ್ತು, ತಾಳ್ಮೆ ಮತ್ತು ವಿಚಾರವಂತಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕುಷ್ಟಗಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಟರಾಜ ಸೋನಾರ್ ಅವರು ಶ್ರೀ ವಿಶ್ವಕರ್ಮರ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿ, ದೇವತೆಗಳಲ್ಲೆ ಪೂಜ್ಯನಾದ ಬ್ರಹ್ಮನ ಮರಿ ಮಗ ಬ್ರಹ್ಮಾತ್ಮನಾದ ವಾಸ್ತು ದೇವನ ಮಗನೆ ವಿಶ್ವಕರ್ಮ ಎಂದು ಅನೇಕ ಪೂರಾಣ, ಶಾಸ್ತ್ರಗಳು ಹೇಳುತ್ತವೆ. ಅಂತಹ ವಿಶ್ವಕರ್ಮನ ವಂಶಕ್ಕೆ ಸೇರಿದವರು ನಾವುಗಳು ಪುಣ್ಯವಂತರು. ವಿಶ್ವಕರ್ಮರು ಅನೇಕ ದೇವಾನು ದೇವತೆಗಳಿಗೆ ಆಯುಧಗಳನ್ನು ಮಾಡಿಕೊಟ್ಟರು ಎಂದರು ಸಹ ಕೆಲವು ಶಾಸ್ತ್ರಗಲ್ಲಿ ಕಾಣವಹುದು. ತ್ರೈತ್ರಾ ಯುಗ, ದ್ವಾಪರ ಯುಗ, ಅಜಂತ ಯಲ್ಲೋರಾ, ನಳಂದ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ಹಂಪಿ ಹಳೆಬಿಡು ಇನ್ನೂ ಮುಂತಾದ ಕಡೆಗಳಲ್ಲಿ ವಿಶ್ವಕರ್ಮರ ಕೃತಿಗಳು, ಅವರ ಮಾಡಿರುವ ಕಾರ್ಯಗಳ ಕುರಿತು ಮಾಹಿತಿ ಸಿಗುತ್ತದೆ. ವಿಶ್ವಕರ್ಮರ ಕಾಯಕ ಸಂಸ್ಕøತಿಯನ್ನು ಅಲ್ಲಿಂದ ಇಲ್ಲಿಯ ವರೆಗೂ ಉಳಿಸಿಕೊಂಡು ಬಂದಿದ್ದೆವೆ. ಅದು ವಿಶ್ವಕರ್ಮರು ನಾವು ಎನ್ನುವುದಕ್ಕೆ ಅಭಿಮಾನ ಪಡಬೇಕು. ಪ್ರತಿ ಗ್ರಾಮದಲ್ಲಿ, ಪ್ರತಿ ಕಾರ್ಯದಲ್ಲಿ ವಿಶ್ವಕರ್ಮರ ಅವಶ್ಯಕತೆ ಇದೆ ಎಂದರು.

ಕೊಪ್ಪಳದ ಶ್ರೀ ಸಿರಸಪ್ಪಯ್ಯನ ಮಠದ ಸಿರಸಪ್ಪಯ್ಯ ಸ್ವಾಮಿಗಳು ಆರ್ಶಿವಚನವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ವಿಶ್ವಕರ್ಮ ಸಮಾಜದ ಮುಖಂಡರಾದ ನಾಗೇಶ ಕುಮಾರ್ ಕಂಸಾಳೆ, ದೇವೇಂದ್ರಪ್ಪ ಬಡಿಗೇರ, ಕಾಳಮ್ಮ ಪತ್ತಾರ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಮೆರವಣಿಗೆ: ಶ್ರೀ ವಿಶ್ವಕರ್ಮ ಜಯಂತಿ ಭಾವಚಿತ್ರದ ಮೇರವಣಿಗೆಗೆ ಕೊಪ್ಪಳ ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಅವರು ಚಾಲನೆ ನೀಡಿದರು. ಮೆರವಣಿಗೆಯು ಶ್ರೀ ಸಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬ ಮಾರ್ಗವಾಗಿ, ಜವಹರ್ ರಸ್ತೆಯ ಮೂಲಕ ಅಶೋಕ ವೃತ್ತದವರೆಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಕುಂಬ ಹೊತ್ತ ಮಹಿಳೆಯರು ಗಮನ ಸೆಳೆದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande