ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ ಭಾಗಶ; ಆರ್ಥಿಕ, ಸಮಿಕ್ಷೆ. ಇದನ್ನು ಬಹಳ ಜನ ಜಾತಿ ಸಮೀಕ್ಷೆ ಎಂದು ತಿಳಿದುಕೊಂಡಿದ್ದಾರೆ. ಇದು ಮಾಡುವಾಗ ಸ್ವಾಭಾವಿಕವಾಗಿ ಜಾತಿ ಬಂದೇ ಬರುತ್ತೆ, ಜಾತಿ ಗಣತಿ ಮಾಡಬೇಕಾಗಿದ್ದು ಕೇಂದ್ರ ಸರ್ಕಾರ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು. ವಿಜಯಪುರ ನಗರದಲ್ಲಿ ಜೊತೆಗೆ ಮಾತನಾಡಿದ ಅವರು, ಇವತ್ತು ಎಲ್ಲಿ ಸಾಮಾಜಿಕ ಪರಿಸ್ಥಿತಿ ಎನಿದೆ? ಶೈಕ್ಷಣಿಕ ಪರಿಸ್ಥಿತಿ ಏನಿದೆ? ಎಲ್ಲಾ ಸಮುದಾಯಗಳಿಗೂ ಮತ್ತು ಆರ್ಥಿಕ ಪರಿಸ್ಥಿತಿ ಗುರುತಿಸಿ ಸೂಕ್ತ ಮೀಸಲಾತಿ ಕೊಡಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಹಳ ಜನ ಇದನ್ನು ಜಾತಿ ಗಣತಿ ಎಂದು ತಿಳಿದುಕೊಂಡಿದ್ದಾರೆ. ಇನ್ನೂ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲಾ, ಸಚಿವ ಸಂಪುಟದಲ್ಲಿ ಮಾಾಧಮಗಳು ವರದಿ ಮಾಡಿದಂತೆ ಯಾವುದೇ ರೋಷಾವೇಷಗಳಾಗಿಲ್ಲಾ, ಆದರೆ ಸೌಹಾರ್ಧಯುತ ಚರ್ಚೆಗಳಾಗಿವೆ. ಏನೇನೂ ಸಮಸ್ಯೆಗಳು ಇವೆ, ಜನರಲ್ಲಿ ಇರುವ ತಪ್ಪುಗಳು ಕುರಿತು ಎಲ್ಲರೂ ಚರ್ಚೆ ಮಾಡಿದ್ದಿವಿ, ಏರು ಧ್ವನಿಯಲ್ಲಾಗಲಿ ಟೇಬಲ್ ಕುಟ್ಡುವದಾಗಿ ಮಾಡಿಲ್ಲಾ ಎಂದು ಸ್ಪಷ್ಟಪಡಿಸಿದರು. ಇನ್ನೂ ಎಸ್ ಎಸ್ ಮಲ್ಲಿಕಾರ್ಜುನ ಕ್ಯಾಬಿನೆಟ್ ನಲ್ಲಿ ಇಲ್ಲಾ, ಅವ್ರು ಹೆಂಗ ಮಾತನಾಡಿದರೂ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ತಾಳ್ಮೆಯಿಂದ ಕೇಳಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande