ಕೋಲಾರ, ೧೯ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೆಜಿಎಫ್ ನಗರದ ಬೌರಿಲಾಲ್ ಪೇಟೆಯಲ್ಲಿ ಮೂರು ಅಂತಸ್ತಿನ ಮನೆ ಕುಸಿದು ಬಿದ್ದಿದೆ. ಮಾಜಿ ನಗರಸಭೆ ಸದಸ್ಯ ಪಠಾಸ್ ಸುರೇಶ್ ಎಂಬುವವರಿಗೆ ಸೇರಿದ ಮೂರು ಅಂತಸ್ತಿನ ಮನೆಯು ದಿಡೀರನೆ ಕುಸಿದು ಬಿದ್ದಿದೆ.
ಕಳೆದ ಎರಡು ವರ್ಷಗಳಿಂದ ಮನೆ ಖಾಲಿ ಇದ್ದ ಹಿನ್ನೆಲೆ ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಕುಸಿದು ಪಕ್ಕದ ಮನೆಯ ಮೇಲೆ ಉರುಳಿದೆ. ಕಟ್ಟಡ ಕುಸಿದ ಕಾರಣ ಜನ ಜಮಾಯಿಸಿದ್ದರು. ಆತಂಕಗೊಂಡಿದ್ದು ಕುಸಿದ ಮನೆ ನೋಡಲು ಜನರು ಜಮಾಯಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಕೆಜಿಎಫ್ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಕಟ್ಟಡವನ್ನ ತೆರವು ಮಾಡಲು ಮುಂದಾಗಿದ್ದಾರೆ
ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಚಿತ್ರ : ಕೆಜಿಎಫ್ ನಗರದ ಬೌರಿಲಾಲ್ ಪೇಟೆಯಲ್ಲಿ ಮೂರು ಅಂತಸ್ತಿನ ಮನೆ ಕುಸಿದಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್