ಗಂಗಾವತಿ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಿಕ್ಷಕರ ಸೇವೆಗೆ ನಾವು ಬೆಲೆ ಕಟ್ಟಲು ಆಗುವುದಿಲ್ಲ , ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರವಿದ್ದು , ಸತತ ಪರಿಶ್ರಮದಿಂದ ನಿಮ್ಮ ಗುರಿಯತ್ತ ಗಮನಹರಿಸಬೇಕು , ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸ್ವರ್ಣಾ ಸಮೂಹ ಸಂಸ್ಥೆ ಚೇರ್ಮನ್ ಡಾ. ಸಿ.ಎಚ್. ವಿ. ಎಸ್. ವಿ. ಪ್ರಸಾದ್ ಹೇಳಿದರು.
ಗಂಗಾವತಿಯ ವಿದ್ಯಾನಗರದಲ್ಲಿರುವ ಶಾರದಾ ವಿದ್ಯಾ ಸಂಸ್ಥೆಯಲ್ಲಿ 78 ನೇ ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ, ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕ ಪ್ರಯತ್ನದೊಂದಿಗೆ ಮಕ್ಕಳ ಭವಿಷ್ಯ ರೂಪಿಸಬೇಕು. ಶಿಕ್ಷಕರ ವೃತ್ತಿ ಪವಿತ್ರವಾದದ್ದು , ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರು ತನಗೆ ಶಿಕ್ಷಣ ನೀಡಿದ ಶಿಕ್ಷಕರ ಬಗ್ಗೆ ಗೌರವ ಮತ್ತು ವಿಶ್ವಾಸವಿರುತ್ತದೆ. ಎಲ್ಲರೂ ವೃತ್ತಿಗೆ ಘನತೆ ತರುವಂತೆ ಕೆಲಸಮಾಡಬೇಕು , ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೂ ಒಗ್ಗಟಿನಿಂದ ಕೆಲಸ ಮಾಡಬೇಕು ಎಂದ ರು.
ತಾಂತ್ರಿಕತೆ ಬೆಳೆದಂತೆ ಡಿಜಿಟಲ್ ಮಾಯಾಲೋಕಕ್ಕೆ ಮರುಳಾಗುತ್ತಿರುವ ಇಂದಿನ ಯುವ ಸಮೂಹ ಓದಿನಿಂದ ವಿಮುಕರಾಗಿದ್ದಾರೆ. ಇದರಿಂದ ಯುವ ಜನಾಂಗದಲ್ಲಿ ಜ್ಞಾನದ ಸಂಪತ್ತು ಕುಂಟುತ್ತಾ ಹೋಗುತ್ತಿದೆ. ಈಗಿನ ಪೀಳಿಗೆ ಸಾಮಾಜಿಕ ಜಾಲತಾಣದಿಂದ ಹೊರಬಂದು ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಓದುವ ಹವ್ಯಾಸ ಅತ್ಯವಶ್ಯಕವಾಗಿದೆ ಅದನ್ನು ರೂಢಿಸಿಕೊಳ್ಳಬೇಕು. ಅನೇಕ ವಿದ್ಯಾ ಸಂಸ್ಥೆಗಳಿಗೆ ಹಾಗೂ ಸಮಾಜ ಸೇವಕ್ಕೆ ಸಹಾಯ ಸಹಕಾರ ಮಾಡುತ್ತ ಬಂದಿರುವ ನಾನು ಈಗ ಶಾರದಾ ವಿದ್ಯಾ ಸಂಸ್ಥೆಯ ಮೊದಲನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ ವೆಚ್ಚವಾಗುವ ಸಂಪೂರ್ಣ ಮೊತ್ತವನ್ನು ನೀಡುತ್ತೇನೆ , ಮುಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಯಾವುದೇ ತರ ಅನುಕೂಲವನ್ನು ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa