ಮಂಗಳೂರು, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿರುವುದಾಗಿ ವಿಠಲ್ ಗೌಡ ಆರೋಪಿಸಿದ್ದ. ಈ ಸಂಬಂಧ ಬುಧವಾರದಿಂದ ಎಸ್ಐಟಿ ಶೋಧ ತೀವ್ರಗೊಳಿಸಿ ಹಲವು ವಸ್ತುಗಳು ಪತ್ತೆ ಮಾಡಿದೆ.
ಬುಧವಾರ ನಡೆದ ಶೋಧದಲ್ಲಿ 5 ತಲೆಬುರುಡೆ ಮತ್ತು ಕೆಲವು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇಂದು ಸತತ 3 ಗಂಟೆಗಳ ಶೋಧದಲ್ಲಿ ಮತ್ತೇ ಎರಡು ತಲೆಬುರುಡೆ , ಸೇರಿ ಮತ್ತಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. 2 ದಿನದ ಕಾರ್ಯಾಚರಣೆ ಇಂದಿಗೆ ಮುಕ್ತಾಯಗೊಂಡಿದ್ದು, ಶೋಧದಲ್ಲಿ ಒಟ್ಟು 7 ತಲೆಬುರುಡೆ ಮತ್ತು 7 ಅಸ್ಥಿಪಂಜರಗಳು ದೊರೆತಿವೆ. ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳನ್ನು ಎಸ್ಐಟಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa