ಶೈಕ್ಷಣಿಕ ಸಂಸ್ಥೆಗಳ ಬಸ್ಗಳ ತಪಾಸಣೆ: ೯.೬೦ ಲಕ್ಷ ರೂ ದಂಡ ವಸೂಲಿ
ಶೈಕ್ಷಣಿಕ ಸಂಸ್ಥೆಗಳ ಬಸ್ಗಳ ತಪಾಸಣೆ: ೯.೬೦ ಲಕ್ಷ ರೂ ದಂಡ ವಸೂಲಿ
ಚಿತ್ರ : ಕೋಲಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳ ಬಸ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ.

ಚಿತ್ರ : ಕೋಲಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳ ಬಸ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ.

ಕೋಲಾರ, ೧೮ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಾಲಾ-ಕಾಲೇಜುಗಳ ವಾಹನಗಳ ತಪಾಸಣಾ ಆಂದೋಲನದಲ್ಲಿ ೧೭೭ ಕೇಸ್ ದಾಖಲಿಸಿ ೯.೬೦ ಲಕ್ಷ ರೂ ದಂಡ ಹಾಗೂ ತೆರಿಗೆಯನ್ನು ವಸೂಲಿ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ.

ಏಪ್ರಿಲ್ ೨೦೨೫ ರಿಂದ ಸೆಪ್ಟೆಂಬರ್ ೧೮ರವರೆಗೆ ಶೈಕ್ಷಣಿಕ ಸಂಸ್ಥೆಗಳ ಬಸ್ಗಳನ್ನು ತಪಾಸಣೆ ನಡೆಸಿ ೧೮ ಸೀಸ್ ಮಾಡಲಾಗಿದ್ದು ೪ ವಾಹನಗಳ ಆರ್ಸಿ ರದ್ದುಗೊಳಿಸಿ ಸ್ಕ್ರಾಪ್ ಮಾಡಲಾಗಿದೆ. ಕೋಲಾರದ ಅರ್ಕ ಶಾಲೆ ೪ ಬಸ್ಗಳ ಮೇಲೆ ಮೊಕದ್ದಮೆ ಹೂಡಲಾಗಿದ್ದು ನರಸಾಪುರ ವಿದ್ಯಾನಿಕೇತನ ಶಾಲೆ ವಿರುದ್ಧ ೫, ಶ್ರೀನಿವಾಸಪುರ ವೇಣು ಶಾಲೆ ವಿರುದ್ಧ ೨, ರೋಣೂರು ವಿಐಪಿ ಶಾಲೆ ಮೇಲೆ ೨ ಕೇಸ್, ಬೆಂಗಳೂರು ಸೆಲೆಸೈಯನ್ ಶಾಲೆ ಎರಡು ಬಸ್ ಮೇಲೆ ಕೇಸ್ ಹಾಕಲಾಗಿದೆ.

ಜಿಲ್ಲೆಯ ಪ್ರತಿಯೊಂದು ಶಾಲೆ-ಕಾಲೇಜಿಗೆ ಭೇಟಿ ನೀಡಿ ಬಸ್ಗಳನ್ನು ತಪಾಸಣೆ ನಡೆಸಿ ತೆರಿಗೆ, ವಿಮೆ, ಆರ್ಸಿ, ಎಫ್ಸಿ ಮುಂತಾದ ದಾಖಲೆಗಳನ್ನು ಪರಿಶೀಲಿಸಿ ಲೋಪ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ೧೫ ವರ್ಷ ಹಳತಾಗಿರುವ ಬಸ್ಗಳನ್ನು ಸ್ಥಳದಲ್ಲೇ ಸ್ಕ್ರಾಪ್ ಮಾಡಲಾಗಿದೆ. ೨ನೇ ಮತ್ತು ೪ನೇ ಶನಿವಾರ, ಭಾನುವಾರದಂದೂ ತಪಾಸಣಾ ಕೆಲಸ ನಡೆಸಲಾಗಿದ್ದು, ಬ್ರೇಕ್ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್, ಮಹಮ್ಮದ್ ಹುಸೇನ್ ಹಾಗೂ ಮಂಜುನಾಥ್ ಅವರು ಆಂದೋಲನದ ಸಾರಥ್ಯ ವಹಿಸಿದ್ದರೆಂದು ಆರ್ಟಿಓ ಎಂ.ವೇಣುಗೋಪಾಲ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ : ಕೋಲಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳ ಬಸ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande