ಶಿವಮೊಗ್ಗ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾನೂನು ಸೇವಾ ಸಮಿತಿಗಳಿಗೆ ಅರೆಕಾಲಿಕ ಸ್ವಯಂ ಸೇವಕರನ್ನು ನೇಮಿಸಿಕೊಳ್ಳುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಸಮಾಜದಲ್ಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಹಾಗೂ ಕಾನೂನು ಸೇವೆಗಳನ್ನು ಪಡೆಯಲು ಅರ್ಹರಿರುವ ವ್ಯಕ್ತಿಗಳಿಗೆ ಸೇವಾ ಮನೋಭಾವದಿಂದ ಕೆಲಸ ಮಾಡುವವರಿಗೆ ಮತ್ತು 10ನೇ ತರಗತಿ ಉತ್ತೀರ್ಣರಾಗಿರುವ ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಆದ್ಯತೆ ನೀಡಲಾಗುವುದು.
ಈ ನೇಮಕಾತಿಯು 1 ವರ್ಷದ ಅವಧಿಯವರಿಗೆ ಮಾತ್ರ ಇರುತ್ತದೆ. ಪ್ರಾಧಿಕಾರ/ಸಮಿತಿ ನೀಡುವ ಗೌರವಧನ ಹೊರತುಪಡಿಸಿ ಯಾವುದೇ ಮೊತ್ತವನ್ನು ಅಪೇಕ್ಷಿಸಬಾರದು. ಪ್ರಾಧಿಕಾರ/ಸಮಿತಿ ನೀಡುವ ತರಬೇತಿಯನ್ನು ಮತ್ತು ಸಭೆಗಳಿಗೆ ತಪ್ಪದೆ ಹಾಜರಾಗಬೇಕು ಹಾಗೂ ಅವರಿಗೆ ವಹಿಸಲಾಗುವ ಕಾರ್ಯಗಳನ್ನು ಕ್ಷಮತೆಯಿಂದ ಪ್ರಾಮಾಣಿಕವಾಗಿ ಮಾಡಬೇಕು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಹಾಗೂ ಆಯಾ ತಾಲೂಕು ಸಮಿತಿಗಳ ಕಚೇರಿಗಳಲ್ಲಿ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಭಾವಚಿತ್ರದೊಂದಿಗೆ ಸೆ. 30 ರೊಳಗಾಗಿ ಸಲ್ಲಿಸುವಂತೆ ಜಿ.ಕಾ.ಸೇ.ಪ್ರಾ.ದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa