ತಾಯಿ, ಮಕ್ಕಳ ಆರೋಗ್ಯ ಮೇಲೆ ದೇಶದ ಭವಿಷ್ಯ : ಬೊಮ್ಮಾಯಿ
ಹಾವೇರಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ತಾಯಂದಿರು ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ನಮ್ಮ ದೇಶದ ಭವಿಷ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯಕ್ಕೆ ಬಹಳ ದೊಡ್ಡ ಒತ್ತು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಹಾವೇರಿಯ
Bommayi


ಹಾವೇರಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ತಾಯಂದಿರು ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ನಮ್ಮ ದೇಶದ ಭವಿಷ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯಕ್ಕೆ ಬಹಳ ದೊಡ್ಡ ಒತ್ತು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹಾವೇರಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 75 ನೇಯ ಹುಟ್ಟು ಹಬ್ಬದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಯೋಜಿತ ಆಸ್ಪತ್ರೆ ಹಾವೇರಿ ವತಿಯಿಂದ ಏರ್ಪಡಿಸಿದ ಸ್ವಸ್ಥ ನಾರಿ - ಸಶಕ್ತ ಪರಿವಾರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಕೇವಲ ಭಾರತ ಒಂದೇ ಸುಮಾರು ಆರೂವರೆ ಪರ್ಸೆಂಟ್ ನಿಂದ ಏಳುವರೆ ಪರ್ಸೆಂಟ್ ಅಭಿವೃದ್ಧಿ ಆಗುತ್ತಿದೆ. ಈ ಅಭಿವೃದ್ಧಿ ಆಗಲು ಪ್ರಧಾನಿ ನರೇಂದ್ರ ಮೋದಿಯವರ ಶ್ರಮದ ಜೊತೆಗೆ ಭಾರತ ದೇಶದ ನಾಗರಿಕರ ಒಂದು ಪರಿಶ್ರಮ ಬಹಳ ದೊಡ್ಡದಿದೆ. ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ಇಷ್ಟು ದೊಡ್ಡ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕೆಂದರೆ ಎಲ್ಲರೂ ಕೂಡ ದೇಶವನ್ನು ಮುಂದೆ ತರಬೇಕು ಎಂಬ ವಿಶ್ವಾಸದೊಂದಿಗೆ ಮುನ್ನಡೆದಾಗ ಮಾತ್ರ ಸಾಧ್ಯ. ಈ ಸಂದರ್ಭದಲ್ಲಿ ನಾನು ಸಮ್ರಗ ಭಾರತದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಮುಂದೆ ಹಲವಾರು ಸವಾಲುಗಳಿವೆ. ಸುಮಾರು 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ಮತ್ತೆ ಬಡತನ ರೇಖೆಗಿಂತ ಕೆಳಗೆ ಹೋಗಬಾರದು ಎಂದು ಅವರ ಕನಸಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande