ಮೋದಿ ಹುಟ್ಟುಹಬ್ಬ : ದೆಹಲಿಯಲ್ಲಿ 'ಸೇವಾ ಪಖ್ವಾಡ' ಆರಂಭ
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೆಹಲಿಯಲ್ಲಿ ಸೇವಾ ಪಖ್ವಾಡ''ಕ್ಕೆ ಚಾಲನೆ ದೊರೆಯಿತು. ಇಂಡಿಯಾ ಗೇಟ್‌ನಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಸೇವಾ ಸಂಕಲ್ಪ ನಡಿಗೆಗೆ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವರು, ಬಿಜೆಪಿ ನಾಯಕರ
ಮೋದಿ ಹುಟ್ಟುಹಬ್ಬ : ದೆಹಲಿಯಲ್ಲಿ 'ಸೇವಾ ಪಖ್ವಾಡ' ಆರಂಭ


ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೆಹಲಿಯಲ್ಲಿ ಸೇವಾ ಪಖ್ವಾಡ'ಕ್ಕೆ ಚಾಲನೆ ದೊರೆಯಿತು.

ಇಂಡಿಯಾ ಗೇಟ್‌ನಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಸೇವಾ ಸಂಕಲ್ಪ ನಡಿಗೆಗೆ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವರು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, “ರಕ್ತದಾನ ಜೀವನದ ಉಡುಗೊರೆ ಮಾತ್ರವಲ್ಲ, ಇದು ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಕೇತ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ಸಾಹಿಬ್ ಸಿಂಗ್, “ಮೋದಿಯವರ ಜೀವನ ನಿಜವಾದ ಕರ್ಮಯೋಗಿಯ ಜೀವನ. ಅವರ ನಾಯಕತ್ವ ಭಾರತಕ್ಕೆ ಜಾಗತಿಕ ವೇದಿಕೆಯಲ್ಲಿ ಹೊಸ ಗುರುತನ್ನು ನೀಡಿದೆ” ಎಂದು ಹೇಳಿದರು.

ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, “ರಕ್ತದಾನ ಅತ್ಯಂತ ಪವಿತ್ರ ಸೇವೆ. ಮೋದಿ ಅವರ ತ್ಯಾಗ ಮತ್ತು ಸೇವಾ ಮನೋಭಾವ ನಮಗೆ ಸ್ಫೂರ್ತಿ” ಎಂದರು.

ಈ ಸಂದರ್ಭದಲ್ಲಿ ಸುಮಾರು 200 ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೇವೆ ಸಲ್ಲಿಸಿದ್ದು, 10 ಪ್ರಮುಖ ರಕ್ತನಿಧಿಗಳು ಭಾಗವಹಿಸಿವೆ.

ಹದಿನೈದು ದಿನಗಳ 'ಸೇವಾ ಪಖ್ವಾಡದಲ್ಲಿ ಸೇವಾ ಚಟುವಟಿಕೆಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆಯ ಸಂದೇಶ ನೀಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande