ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದಲೈ ಲಾಮಾ
ಧರ್ಮಶಾಲಾ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಉತ್ತಮ ಆರೋಗ್ಯ ಹಾರೈಸಿದ್ದಾರೆ. ಪತ್ರದಲ್ಲಿ ಅವರು, “ಕಳೆದ ಕೆಲವು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಮತ್ತು ಸಮೃದ್ಧಿಗೆ ನಾನು ಸಾಕ್ಷಿಯಾಗಿದ್
ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದಲೈ ಲಾಮಾ


ಧರ್ಮಶಾಲಾ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಉತ್ತಮ ಆರೋಗ್ಯ ಹಾರೈಸಿದ್ದಾರೆ.

ಪತ್ರದಲ್ಲಿ ಅವರು, “ಕಳೆದ ಕೆಲವು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಮತ್ತು ಸಮೃದ್ಧಿಗೆ ನಾನು ಸಾಕ್ಷಿಯಾಗಿದ್ದೇನೆ. ಭಾರತದ ಯಶಸ್ಸು ಜಾಗತಿಕ ಬೆಳವಣಿಗೆಗೆ ಸಹಕಾರಿಯಾಗಿದೆ” ಎಂದಿದ್ದಾರೆ.

ಅವರು ಭಾರತವನ್ನು ಧಾರ್ಮಿಕ ಬಹುತ್ವ, ಸಾಮರಸ್ಯ ಮತ್ತು ಸ್ಥಿರತೆಯ ಮಾದರಿ ಎಂದು ಕೊಂಡಾಡಿ, “ಟಿಬೆಟಿಯನ್ನರಿಗೆ ಭಾರತ ಆಧ್ಯಾತ್ಮಿಕ ಪರಂಪರೆಯ ಮೂಲ ಮತ್ತು ಭೌತಿಕ ನೆಲೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande