ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಲವು ದಶಕಗಳ ಕಾಲ ಕನ್ನಡ ನಾಡಿನ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿಯೇ ತಮ್ಮ ವಿಶ್ರಾಂತ ಜೀವನವನ್ನು ಕಳೆಯುತ್ತಿದ್ದ ಹಿರಿಯೂರು ಮೂಲದ ಐ ಎಫ್ ಎಸ್ ಅಧಿಕಾರಿ ಎಸ್. ಪರಮೇಶ್ವರಪ್ಪ ನಿನ್ನೆ ೧೬-೦೯-೨೦೨೫ ರಂದು ರಾತ್ರಿ ೯ ಗಂಟೆಗೆ ಅಸ್ತಂಗತರಾಗಿದ್ದಾರೆ. ಮೃತರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು. ನಂತರ ಹಿರಿಯೂರಿನ ಐಮಂಗಲ ಗ್ರಾಮದಲ್ಲಿನ ತೋಟದಲ್ಲಿ ಸಂಜೆ ೪ ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa