ವಿಜಯಪುರ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ತನಿಖಾ ತಂಡಗಳನ್ನು ರಚಿಸಲಾಗಿದ್ದು, ನಾನಾ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಮಾತನಾಡಿದ ಅವರು, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ. ಈಗಾಗಲೇ ಮಹಾರಾಷ್ಟ್ರದ ಹುಲಜಂತಿಯಲ್ಲಿ ಕೃತ್ಯಕ್ಕೆ ಬಳಸಿದ ಒಂದು ವಾಹನ ಪತ್ತೆ ಹಚ್ಚಲಾಗಿದೆ. ಶೀಘ್ರದಲ್ಲೇ ಇಡೀ ಪ್ರಕರಣದ ತನಿಖೆ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 6.30 ರಿಂದ 7.15ರ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಸಂಜೆ 4.30ರ ಸುಮಾಗರಿಗೆ ಅಕೌಂಟ್ ಓಪನ್ ಮಾಡಲು ಬಂದ ಒಬ್ಬ ವ್ಯಕ್ತಿ 6.30ರವರೆಗೆ ಬ್ಯಾಂಕ್ ಒಳಗಡೆಯೇ ಕುಳಿತಿದ್ದಾನೆ. ಯಾವ ಬ್ಯಾಂಕ್ ಬಂದ್ ಆಗುವ ಸಮಯ ಬರುತ್ತದೋ ಆಗ ಇನ್ನಿಬ್ಬರನು ಒಳಗಡೆ ಕರೆಯಿಸಿಕೊಂಡಿದ್ದಾರೆ. ಆಗ ಬ್ಯಾಂಕ್‌ನಲ್ಲಿ 6 ಸಿಬ್ಬಂದಿ ಹಾಗೂ 4 ಜನ ಗ್ರಾಹಕರಿದ್ದರು. ಅವರನ್ನೆಲ್ಲ ಹೆದರಿಸಿ ಬ್ಯಾಂಡ್‌ನಿಂದ ಕೈ ಕಟ್ಟಿ ಒಂದು ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಸಿಬ್ಬಂದಿಯನ್ನು ಹೆದರಿಸಿ ದರೋಡೆ ನಡೆಸಿದ್ದಾರೆ. ಲಾಕರ್ ಓಪನ್ ಮಾಡಿಸಿ 1.4 ಕೋಟಿ ರೂಪಾಯಿ, ಚಿನ್ನಾಭರಣ ಇರುವ 398 ಪ್ಯಾಕೇಟ್ ಕಳುವಾಗಿದೆ. ಚಿನ್ನ ಹಾಗೂ ನಗದು ಸೇರಿ ಕಳುವಾದ ವಸ್ತುಗಳ ಮೌಲ್ಯ 21.4 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನೂ ನಿಖರ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande