ಕಾಂಗ್ರೆಸ್ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು : ಸಂಗಮೇಶ
ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಕೃಷ್ಣಾ 3ನೇ ಹಂತದ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ರೈತ ಹೋರಾಟಗಾರ ಸಂಗಮೇಶ ಸಗರ ಆಗ್ರಹಿಸಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ನೀರಾವರಿ ಜಮೀನಿಗೆ 40 ಲಕ್ಷ, ತರಿ ಜಮೀನಿಗೆ 30 ಲಕ್ಷ, ಒಣ ಭೂಮಿಗೆ 25 ಲಕ್ಷ ಕೊಡಬೇ
ಪರಿಹಾರ


ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಕೃಷ್ಣಾ 3ನೇ ಹಂತದ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ರೈತ ಹೋರಾಟಗಾರ ಸಂಗಮೇಶ ಸಗರ ಆಗ್ರಹಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ನೀರಾವರಿ ಜಮೀನಿಗೆ 40 ಲಕ್ಷ, ತರಿ ಜಮೀನಿಗೆ 30 ಲಕ್ಷ, ಒಣ ಭೂಮಿಗೆ 25 ಲಕ್ಷ ಕೊಡಬೇಕು ಎಂದು ತೀರ್ಮಾನ ಸರ್ಕಾರ ತೀರ್ಮಾನ ಮಾಡಿದೆ. ಇದು ರೈತರಿಗೆ ಅನುಕೂಲ ಆಗಲ್ಲ. ಆಲಮಟ್ಟಿ ಭಾಗದಲ್ಲಿ ಕೋಟಿ ಕೋಟಿಗೆ ಬೆಲೆಬಾಳುವ ಜಮೀನುಗಳಿವೆ. ಆದ್ರೇ, ಸರ್ಕಾರ ಮಾತ್ರ ಬಿಡಿಗಾಸು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಮತ್ತೊಮ್ಮೆ ಸರ್ಕಾರ ಸಭೆ ನಡೆಸಿ, ಯೋಗ್ಯವಾದ ಪರಿಹಾರ ನೀಡಬೇಕು ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande