ಕೊಪ್ಪಳ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್: 2025-26ನೇ ಸಾಲಿನಲ್ಲಿ ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಯನ್ನು ಹೊರ ಹೊಮ್ಮಿಸಲು ಬಂಜಾರರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಲಾ ಮಳಾವೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಹಾಗೂ ಆಸಕ್ತ ಕಲಾವಿದರಿಂದ ನಿಗಿದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಬಂಜಾರ ಸಮುದಾಯದ ಬಹುಮುಖಿ ಕಲಾ ಪ್ರಕಾರಗಳಾದ ವಾಜಾ ವಾದ್ಯ ಕಲೆ, ಬಂಜಾರ ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಬಂಜಾರ ಜಾನಪದ ನೃತ್ಯ, ಬಂಜಾರ ಯುವತಿಯರ ಘೂಮರ್ ನೃತ್ಯ, ಪುರುಷರ ಲೆಂಗಿ ನೃತ್ಯ, ನಂಗಾರಾ ಠೋಳಿ ಬಿಡಿಸುವ ನೃತ್ಯ, ಕಥನ ಗಾಯನ(ಸಣ್ಣ ವಾಜಾ), ಬಂಜಾರ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಬಂಜಾರ ಸುಗಮ ಸಂಗೀತ (ಭಕ್ತಿಗೀತೆ ಭಾವಗೀತೆ ಮತ್ತು ಜಾನಪದ), ಬಂಜಾರ ಬಾಲಕರ ಕಲಾ ನೃತ್ಯ (ಲೆಂಗಿ, ಕಥನ ಗಾಯನ ಇತ್ಯಾದಿ), ಬಂಜಾರ ಬಾಲಕಿಯರ ಕಲಾ ನೃತ್ಯ, ಬಂಜಾರ ಡಾವಲೋ ಮತ್ತು ಹವೆಲಿ, ಬಂಜಾರ ಪುರುಷರ ಸಾಂಪ್ರದಾಯಿಕ ಕಡಿ, (ಕಸಳಾತೆ, ಮರಣ ಸಿಕವಾಡಿ, ಗೋಳಖಾಯರ್ ಕಡಿ, ಪಾನೇರ್ ಭಾಂಗ್, ಖ್ಯೇಮ್(ಕ್ಷೇಮ) ನೃತ್ಯ ಪ್ರಕಾರಗಳಲ್ಲಿ ಬಂಜಾರ ಸಮುದಾಯದ ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಬಹುದು. ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿಮಾಡಿ ಸೆಪ್ಟೆಂಬರ್ 28 ರೊಳಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ವಲಯ ಕಚೇರಿ, ಕೊಪ್ಪಳ ಸರಸ್ವತಿ ವಿದ್ಯಾ ಮಂದಿರದ ಹತ್ತಿರ, ಕೇಂದ್ರೀಯ ವಿದ್ಯಾಲಯ ರಸ್ತೆ, ಜಿಲ್ಲಾ ಬಂಜಾರ ಭವನ, ಬಹದ್ದೂರ ಬಂಡಿ, ಕೊಪ್ಪಳ-583238 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9964678184, 9743806039, 9964633860 ಗೆ ಸಂಪರ್ಕಿಸಬಹುದು.
ಈ ಹಿಂದೆ ನಿಗಮದಿಂದ ನಡೆದ ಎಲ್ಲಾ ಕಲಾ ಮಳಾವೋ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದ ಕಲಾ ತಂಡಗಳ ಕಲಾವಿದರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ ಕೊಪ್ಪಳ, ಗದಗ, ವಿಜಯನಗರ ಹಾಗೂ ಬಳ್ಳಾರಿಯ ವಲಯ ಕಚೇರಿಯ ವಲಯ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್