ಹೊಸಪೇಟೆ , 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ನಗರಸಭೆ ನಿಧಿಯ ಯೋಜನೆ ಅಡಿಯಲ್ಲಿ ವ್ಯಕ್ತಿ ಸಂಬಂಧಿತ ಅನುಕೂಲಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ವೈಯಕ್ತಿಕ ಫಲಾನುಭವಿಗಳಾಗ ಬಯಸುವವರು ಯೋಜನೆಯಡಿ ಅರ್ಜಿಯನ್ನು ಸೆಪ್ಟಂಬರ್ 30 ರೊಳಗಾಗಿ ಹೊಸಪೇಟೆ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದು.
ಹೊಸಪೇಟೆ ನಗರದ ಎಂಬಿಬಿಎಸ್ ಅಥವಾ ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ 50 ಸಾವಿರ ರೂ. ಮೀರದಂತೆ ಸಹಾಯಧನ ನೀಡಲಾಗುವುದು.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಇತರೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹೊಸಪೇಟೆ ನಗರದ ಎಸ್‌ಟಿ ಬಡಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ಪರಿಶಿಷ್ಟ ಪಂಗಡ ಹಾಗೂ ಇತರೆ ಬಡಜನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುವುದು. ನಗರದ ವಿಕಲಚೇತನ ಮಕ್ಕಳಿಗೆ ರೆಟ್ರೋಪಿಟ್‌ಮೆಂಟ್ ಕಿಟ್ ಸಹಿತ ಯಂತ್ರ ಚಾಲಿತ ದ್ವಿ-ಚಕ್ರ ವಾಹನ ಖರೀದಿಸಿ ನೀಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಹಾಗೂ ಅರ್ಜಿ ನಮೂನೆಯನ್ನು ಕಾರ್ಯಾಲಯದ ವಿಷಯ ನಿರ್ವಾಹಕರಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.hospetcity.gov.in ವೆಬ್‌ಸೈಟ್ ಅನ್ನು ಸಂಪರ್ಕಿಸಿ ಮಾಹಿತಿಯ ವಿವರವನ್ನು ಪಡೆದುಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್