ದಸರಾ ಕ್ರೀಡಾಕೂಟ : ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಕಾಲೇಜಿಗೆ ಪ್ರಶಸ್ತಿ
ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದು ದಸರಾ ವಿಭಾಗಮಟ್ಡದ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ‌ ಪಡೆದು ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಸರಾ ಕ್ರೀಡಾಕೂಟ : ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಕಾಲೇಜಿಗೆ ಪ್ರಶಸ್ತಿ


ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದು ದಸರಾ ವಿಭಾಗಮಟ್ಡದ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ‌ ಪಡೆದು ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ನಾಯಕತ್ವದಲ್ಲಿ ತಂಡ ದಸರಾ ವಿಭಾಗಮಟ್ಟದಲ್ಲಿ ಗೆಲುವು ಸಾಧಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅದೇ ರೀತಿ ದಸರಾ ತಾಲೂಕ ಮತ್ತು ಜಿಲ್ಲಾದಲ್ಲಿ ಸಹ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ಇದೇ ತಂಡ ಪದವಿಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಸಹ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಡದ ಆಯ್ಕೆಯಲ್ಲಿ ಐದು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಅಲ್ಲದೇ ಆರು ಜನ ವಿದ್ಯಾರ್ಥಿನಿಯರು ಏರ್ ರೈಫಲ್ ಶೂಟಿಂಗ್ ಓಪನ್ ಮತ್ತು ಪೀಪ್ ಕ್ರಮವಾಗಿ ಮೊದಲ ಮೂರು ಸ್ಥಾನ ಹಾಗೂ ಸಾಹಿತ್ಯ ಎಂ. ಗೊಂಡಬಾಳ ಅವರು ಜಂಪ್ ರೋಪ್ (ಟೀಮ್) ಹಾಗೂ ಕರಾಟೆ 64+ ಕೆ.ಜಿ. ವಿಭಾದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ತಂಡದಲ್ಲಿ ಕಾಲೇಜಿನ ಸಾಹಿತ್ಯ ಎಂ. ಗೊಂಡಬಾಳ, ಗ್ರೀಷ್ಮಾ ಮಧುಸೂದನ್ ರಡ್ಡಿ, ಸಂಜನಾ ಶ್ರೀನಿವಾಸ ಹೋಟಕರ್, ಬೀಬಿ ಬತುರ್ ಆಫ್ಶೀನ್, ಮೊನಿಷಾ ಗಂಗಾಧರ್, ರಂಜಿತಾ ವೀರಭದ್ರಪ್ಪ, ಅಕ್ಷಯ ಯಾದವ್, ವೀಣಾ ವೆಂಕಟೇಶ, ಅಕ್ಷರ ಎಂ. ಗೊಂಡಬಾಳ, ಶಮಾ‌ ಎಸ್. ಬಿಸರಳ್ಳಿ ಇದ್ದರು. ಸಾಧನೆ ಮಾಡಿದ ತಂಡಕ್ಕೆ ಕಾಲೇಜಿನ ಪ್ರಾಚಾರ್ಯ ಸತೀಶ, ನೆಟ್ ಬಾಲ್ ಅಸೋಸಿಯೇಷನ್ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿನಂದಿಸಿದ್ದಾರೆ.

ವಿಜೇತರಿಗೆ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ತರಬೇತುದಾರರಾದ ಯತಿರಾಜ ಇತರರು ಬಹುಮಾನ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande