ವಿಜಯಪುರ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ವಿಜಯಪುರ ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಈಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಡೋಬಲೆ ಗಲ್ಲಿಯ ಯುವಕ ಶುಭಂ ಸಂಕಪಾಳ ಅವರ ಮನೆಗೆ ಹಾಗೂ ಗಾಯಗೊಂಡ ಯುವಕರ ಮನೆಗಳಿಗೆ ಇಂದು ಗಜಾನನ ಮಹಾಮಂಡಳ ಸಂಸ್ಥಾಪಕರು ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾಮಂಡಳ ಪದಾಧಿಕಾರಿಗಳು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಹಾಮಂಡಳದ ವತಿಯಿಂದ ಹಣಕಾಸಿನ ನೆರವು ನೀಡಿದರು. ಏನೇ ಕಷ್ಟ ಇದ್ದರೂ ಗಜಾನನ ಮಹಾಮಂಡಳಕ್ಕೆ ತಿಳಿಸಲು ಮಹಾಮಂಡಳ ಹಾಗೂ ಪದಾಧಿಕಾರಿಗಳು ತಮ್ಮ ಕುಟುಂಬದ ಜೊತೆಗೆ ಇದ್ದು ಯಾವದೇ ನೆರವು ನೀಡಲು ಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮರಾಠಾ ಸಮಾಜದ ಹಿರಿಯರಾದ ವಿಜಯ ಚವ್ಹಾಣ, ಪಾಲಿಕೆ ಸದಸ್ಯ ರಾಹುಲ್ ಜಾಧವ ಮಾತನಾಡಿ ಕುಟುಂಬಕ್ಕೆ ಮಹಾಮಂಡಳ ಸಹಾಯ ಹಸ್ತ ಚಾಚಿರುವುದು ಸ್ವಾಗತನೀಯ. ಮರಾಠಾ ಸಮಾಜದ ಜೊತೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತುಂಬಾ ಒಳ್ಳೆಯ ಬಾಂಧವ್ಯ ಇರಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಮಡಿವಾಳಪ್ಪ ಸಜ್ಜನ, ರಾಹು ಹುನ್ನೂರ, ಈರಣ್ಣ ಪಟ್ಟಣಶೆಟ್ಟಿ, ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande