ಧಾರವಾಡ ಕೃಷಿ ಮೇಳದಲ್ಲಿ ಅವಘಡ ; ಯುವಕ ಸಾವು
ಧಾರವಾಡ, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಂದಿನಿಂದ ಪ್ರಾರಂಭವಾಗಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳದ ಮೊದಲ‌ ದಿನವೇ ದುರಂತವೊಂದು ಸಂಭವಿಸಿದೆ‌. ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ಅವಘಡ ನಡೆದು ಓರ್ವ ಯುವಕ ಮೃತಪಟ್ಟಿದ್ದಾನೆ. ತುಮಕೂರು ಮೂಲದ ಪರಶುರಾಮ (32) ಮೃತ ವ್ಯಕ್ತಿ. ಇಂದಿ
Death


ಧಾರವಾಡ, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಂದಿನಿಂದ ಪ್ರಾರಂಭವಾಗಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳದ ಮೊದಲ‌ ದಿನವೇ ದುರಂತವೊಂದು ಸಂಭವಿಸಿದೆ‌. ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ಅವಘಡ ನಡೆದು ಓರ್ವ ಯುವಕ ಮೃತಪಟ್ಟಿದ್ದಾನೆ.

ತುಮಕೂರು ಮೂಲದ ಪರಶುರಾಮ (32) ಮೃತ ವ್ಯಕ್ತಿ. ಇಂದಿನಿಂದ ನಡೆಯುವ ಕೃಷಿ ಮೇಳದ ಪ್ರದರ್ಶನಕ್ಕೆ ಟ್ರ್ಯಾಕ್ಟರ್ ತಂದಿದ್ದರು. ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ನಿಯಂತ್ರಣ ತಪ್ಪಿ ಪರಶುರಾಮನ ಮೈಮೇಲೆ ಬಿದ್ದು, ಸ್ಥಳದಲ್ಲೇ ಅಸುನೀಗಿದ್ದಾನೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande