ಕೋಲಾರ, ೧೧ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿ ಉದ್ಯಾನವನಗಳ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ನಮ್ಮ ಕೋಲಾರ ಜಿಲ್ಲೆಯಲ್ಲಿಯೇ ವಿಶೇಷವಾಗಿ ಒಂದು ತಂಡವನ್ನು ರಚನೆ ಮಾಡಿ ಎಲ್ಲಾ ಭಾಗಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲು ಕೋಲಾರಮ್ಮ ಸ್ವಚ್ಛತಾ ಕಾರ್ಯ ಪಡೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ನಗರಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್ ಪೋರ್ಸ್ ರಚಿಸುವ ಬಗ್ಗೆ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳು ಸಿಟಿ ಸೈಕಲ್ ರೌಂಡ್ಸ್ ನಡೆಸಿದಾಗ ಕೋಲಾರ ನಗರಸಭೆಯ ಸರ್ವಜ್ಞ ಉದ್ಯಾನವನದಲ್ಲಿ ಬ್ಯಾಂಡ್ ಸ್ಟೇಜ್ ಮತ್ತು ಟಿ.ವಿ ವೀಕ್ಷಣೆ ಕಟ್ಟಡಗಳನ್ನು ದುರಸ್ಥಿಪಡಿಸಲು ಸೂಚಿಸಿ, ತುರ್ತಾಗಿ ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಉದ್ಯಾನವನಗಳಲ್ಲಿ ಸಾಕಷ್ಟು ಬೆಳಕು ಇರುವಂತೆ ಬೀದಿ ದೀಪಗಳನ್ನು ಅಳವಡಿಸಬೇಕು, ಉದ್ಯಾನವನಗಳ ಅಭಿವೃದ್ಧಿಗಾಗಿ ಡಿ.ಪಿ.ಆರ್. ಅಂದಾಜು ಪಟ್ಟಿಗಳನ್ನು ತಯಾರಿಸಿ, ಅನುದಾನದ ಲಭ್ಯತೆಯ ಮೇರೆಗೆ ಅನುಷ್ಠಾನಗೊಲಿಸಬೇಕು ಎಂದು ತಿಳಿಸಿದರು.
ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆಗಳನ್ನು ಮತ್ತು ಬಯಲು ವ್ಯಾಯಾಮ ಸಲಕರಣೆಗಳನ್ನು ಕೂಡಲೇ ದುರಸ್ಥಿಪಡಿಸಿ ಬಣ್ಣ ಬಳೆಯುವುದು. ಉದ್ಯಾನವನಗಳಲ್ಲಿ ಮಳೆ ನೀರು ನಿಲ್ಲದಂತೆ ಆಗತ್ಯ ಕೆಲಗಳನ್ನು ತೆಗೆದುಕೊಳ್ಳುವುದು.ಉದ್ಯಾನವನಗಳಲ್ಲಿ ದೊಡ್ಡ ಮರಗಳ ಕೊಂಬೆಗಳನ್ನು ಟ್ರಿಮ್ ಮಾಡುವುದು. ಪಾಥ್ ವೇ ಪಕ್ಕದಲ್ಲಿನ ಸಣ್ಣ ಗಿಡಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪಾದನೆ ಮಾಡುತ್ತಿರುವ ಗೊಬ್ಬರವನ್ನು ಪಾರ್ಕ್ಗಳಲ್ಲಿ ಗಿಡ ಮರಗಳಿ ಬಳಸಲು ಕ್ರಮ ವಹಿಸುವುದು. ಉದ್ಯಾನವನಗಳಲ್ಲಿ ಒಣಗಿ ಬೀಳುವ ಎಲೆಗಳನ್ನು ಉದ್ಯಾನವನದ ಮೂಲೆಯಲ್ಲಿ ಪಿಟ್ ಮಾದರಿ ನಿರ್ಮಿಸಿ, ಗೊಬ್ಬರ ತಯಾರಿಸಲು ಕ್ರಮ ವಹಿಸುವುದು.
ಉದ್ಯಾನವನಗಳಲ್ಲಿ ಅವಶ್ಯಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು. ಈಗಾಗಲೇ ಲಭ್ಯವಿದ್ದರೆ ಅವುಗಳಿಗೆ ನೀರಿನ ವ್ಯವಸ್ಥೆ ಮತ್ತು ಸುಚಿತ್ವವನ್ನು ಮಾಡುವುದು ಎಂದು ತಿಳಿಸಿದರು.
ಉದ್ಯಾನವನಗಳಲ್ಲಿ ನೀರಿನ ಕಾರಂಜಿಗಳನ್ನು ದುರಸ್ಥಿಪಡಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕ್ರಮವಹಿಸುವುದು. ಉದ್ಯಾನವನಗಳ ಸೂಕ್ತ ನಿರ್ವಹಣೆಗಾಗಿ ಉದ್ಯಾನವನದ ಸುತ್ತ ಮುತ್ತಲಿನ ಸಾರ್ವಜನಿಕರು ಮತ್ತು ಉದ್ಯಾನವನಗಳಲ್ಲಿ ವಾಯುವಿಹಾರ ವ್ಯಾಯಾಮ ಮಾಡುವ ಮತ್ತು ಆಟ ಆಡುವ ಜನರ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸದಸ್ಯರನ್ನೊಳಗಂಡಂತೆ ಒಂದು ಸಂಘವನ್ನು ರಚಿಸಿ ಸಂಬಂಧಿಸಿದ ನಿರ್ವಹಣೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿ ಮಾಹೆ ಸಭೆ ನಡೆಸಿ ಅದರಂತೆ ನಿರ್ಮಾಣ ಮತ್ತು ನಿರ್ವ ಹಣೆ ಮಾಡಲು ಕ್ರಮ ವಹಿಸಬೇಕು ಎಂದರು
ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ದೊಡ್ಡ ಉದ್ಯಾನವನಗಳಿಗೆ ಓರ್ವ ಸಿಬ್ಬಂದಿಯನ್ನು ಸುರಕ್ಷತೆಗೆ ಮತ್ತು ನಿರ್ವಹಣೆಗಾಗಿ ನೇಮಿಸಲು ಕ್ರಮ ವಹಿಸಲು ತಿಳಿಸಿದರು.
ಉದ್ಯಾನವಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು, ಉದ್ಯಾನವನ ತೆಗೆಯುವ ಮತ್ತು ಮುಚ್ಚುವ ಸಮಯ ತಿಳಿಸುವ ವಿವರವಾದ ನಾಮಫಲಕಗಳನ್ನು ಅಳವಡಿಸುವುದು. ಉದ್ಯಾನವನಗಳಲ್ಲಿ ನಿರ್ಮಿಸಿರುವ ಮಹನಿಯರ ಪುತ್ಥಳಿಗಳಿಗೆ ಮೇಲ್ಟಾವಣಿ ಮತ್ತು ಪ್ರತಿಮೆಯ ಸುತ್ತಲೂ ಫೇವರ್ ಬ್ಲಾಕ್, ರೇಲಿಂಗ್ಸ್ ಮತ್ತು ವಿದ್ಯುತ್ ದೀಪ ಅಳವಡಿಸಿ, ಸುರಕ್ಷಿತವಾಗಿ ಯಾವುದೇ ರೀತಿಯ ದಕ್ಕೆಯಾಗದಂತೆ ರಕ್ಷಿಸುವ ಅಗತ್ಯ ಕ್ರಮ ವಹಿಸುವುದು.ಉದ್ಯಾನವನಗಳಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಅಳವಡಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸುವುದು. ಉದ್ಯಾನವನಗಳ ನಿರ್ವಹಣೆಗಾಗಿ ಅಗತ್ಯತೆಗೆ ಅನುಗುಣವಾಗಿ ಕೊಳವೆಬಾವಿ ಅಥವಾ ಸೂಕ್ತ ನೀರಿನ ವ್ಯವಸ್ಥೆ ಅಳವಡಿಸುವುದು. ಎಲ್ಲಾ ಉದ್ಯಾನವನಗಳಲ್ಲಿ ಮಳೆನೀರು ಹಿಂಗು ಗುಂಡಿಗಳನ್ನು ನಿರ್ಮಿಸಿ ಸುರಕ್ಷಾ ರೀತಿಯಲ್ಲಿ ನಿರ್ವಹಿಸಲು ಕ್ರಮ ವಹಿಸಬೇಕು.
ಉದ್ಯಾನವನಗಳಲ್ಲಿನ ಆಳಾಗಿರುವ ಆಸನಗಳನ್ನು ದುರಸ್ಥಿಪಡಿಸಿ ಬಣ್ಣ ಬಳೆಯುವುದು ಹಾಗೂ ಅವಶ್ಯಕತೆ ಇದ್ದಲ್ಲಿ ಇನ್ನೂ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಬೇಕು. ಉದ್ಯಾನವನ ಗಳಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ ಕ್ರಮವಹಿಸಿ. ನಗರ ಸ್ಥಳೀಯ ಸಂಸ್ಥೆಗಳ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ ಒಂದರಂತೆ ಸ್ವಚ್ಛತಾ ಕಾರ್ಯಪಡೆಯನ್ನು ರಚಿಸುವಂತೆ ತಿಳಿಸಿದರು.
ಕೋಲಾರ ನಗರಸಭೆ - ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ರಚಿಸಿ ಕಾರ್ಯ ನಿರ್ವಹಿಸಿ ನಂತರ ಯಶಸ್ವಿಯಾದರೆ ಬೇರೆ ಪುರಸಭೆ ಮತ್ತು ನಗರಸಭೆ ಗಳಲ್ಲಿ ಇದೇ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಮುಂದುವರೆಸಲು ತಿಳಿಸಿದರು.
ಪ್ರಸ್ತುತ ತಂಡದ ಕಾರ್ಯಾಚರಣೆಗೆ ಪ್ರತ್ಯೇಕ ಜೀಪ್ ಮಾದರಿಯ ವಾಹನವನ್ನು ಒಂದು ವಿಶಿಷ್ಟ ಬಣ್ಣ ಬಳೆದು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು. ನಗರಸಭೆ/ಪುರಸಭೆ ನಿಧಿ ಹಾಗೂ ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ಅನುದಾನವನ್ನು ಕ್ರಿಯಾಯೋಜನೆ ಅನುಮೋದನೆ ಪಡೆದು ಕ್ರಮವಹಿಸಲು ಸೂಚಿಸಿದರು.
ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಯಲ್ಲಿ ಕೆಲಸ ನಿರ್ವಹಿಸುವವರು:- ನಗರಸಭೆ ಅಭಿಯಂತರರು/ಆರೋಗ್ಯ ನಿರೀಕ್ಷಕರು ತಂಡದ ಮುಖ್ಯಸ್ಥರಾಗಿರುತ್ತಾರೆ,ಸಮುದಾಯ ಸಂಘಟನಾಧಿಕಾರಿ/ಸಂಘಟಕರು, ಸಮುದಾಯ ಮೊಬೈಲೈಜರ್,ಗೃಹ ರಕ್ಷಕರು,ಒಬ್ಬ ಪೊಲೀಸ್ ಸದಸ್ಯರಾಗಿರುತ್ತಾರೆ ಒಟ್ಟು ೫ ಜನರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಗರ ಭಾಗಗಳಲ್ಲಿರುವ ಬ್ಲಾಕ್ ಸ್ಪಾಟುಗಳನ್ನು ಗುರುತಿಸಿ ಸುಂದರಗೊಳಿಸಬೇಕು ಮತ್ತು ಅಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅದೇ ಸ್ಥಳಗಳಲ್ಲಿ ಕಸವನ್ನು ಹಾಕಬಾರದು ಎಂದು ದೊಡ್ಡ ಬೋರ್ಡ್ಗಳನ್ನು ಅಳವಡಿಸಿ, ಪದೇ ಪದೇ ಕಸವನ್ನು ನಿರಂತರವಾಗಿ ಹಾಕುತ್ತಿದ್ದರೆ ಅವರಗೆ ದಂಡವನ್ನು ವಿಧಿಸುವ ಕೆಲಸವನ್ನು ಮಾಡಬೇಕು.ಕಸ ವಿಲೇವಾರಿ ವಾಹನಗಳಲ್ಲಿ ಹೆಚ್ಚು ಅರಿವು ಮೂಡಿಸಲು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕವಾದ ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕಂಟ್ರೋ ಲ್ ರೂಂ ತೆರೆಯಬೇಕು ಇದರ ಮೂಲಕ ಸಾರ್ವ ಜನಿಕರ ದೂರುಗಳನ್ನು ಹಾಗೂ ಟಾಸ್ಕ್ ಪೋ ರ್ಸ್ರವರು ಪರಿಶೀಲಿಸಿ ತಿಳಿಸುವ ಸ್ಥಳಗಳಿಗೆ ಗುತ್ತಿಗೆದಾರ ಅಥವಾ ಸಿಬ್ಬಂದಿಯನ್ನು ನಿಯೋ ಜಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಈ ತಂಡವು ಪ್ರತಿ ದಿನ ಬೆಳಗ್ಗೆ ೬.೦೦ ರಿಂದ ೯.೦೦ ರವರೆಗೆ ಸಂಜೆ ೫.೦೦ ರಿಂದ ೮.೦೦ ರವರೆಗೆ ನಗರ / ಪಟ್ಟಣಗಳನ್ನು ಪರಿವೀಕ್ಷಣೆ ಮಾಡಿ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸುವುದು ಮತ್ತು ಇವುಗಳನ್ನು ತೆಗೆದು ತ್ಯಾಜ್ಯ ಸಂಗ್ರಹವಾಗದಂತೆ ಕ್ರಮವಹಿಸಬೇಕು,ರಸ್ತೆ ಬದಿ, ಚರಂಡಿ ಹಾಗೂ ಜಲಾಕಾಯಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುವುದು ಹಾಗೂ ಸುಧಾರಣೆಯಾಗದ ಸಂದರ್ಭದಲ್ಲಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು.
ಸಿ&ಡಿ ತ್ಯಾಜ್ಯವನ್ನು ರಸ್ತೆ ಬದಿ, ಕೆರೆಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ವಿಲೇ ಮಾಡುವವರ ವಿರುದ್ಧ ಸೂಕ್ತ ದಂಡವಿಧಿಸಿ ಸೂಕ್ತ ಕಾನೂನಿನ ಕ್ರಮ ಜರುಗಿಸುವುದು.ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು ಹಾಗೂ ಉಪಯೋಗಿಸುವವರ ವಿರುದ್ಧ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದು.ಯು.ಜಿ.ಡಿ ಮತ್ತು ಕುಡಿಯುವ ನೀರಿನ ಸೋರಿಕೆಗಳ ಕುರಿತು ತಾಂತ್ರಿಕ ಶಾಖೆಗೆ ವರದಿ ಸಲ್ಲಿಸುವುದು. ಸಾರ್ವಜನಿಕರಲ್ಲಿ ನಗರದ ಸ್ವಚ್ಛತೆಯ, ತ್ಯಾಜ್ಯ ನಿರ್ವಹಣೆಯ, ಪ್ಲಾಸ್ಟಿಕ್ ನಿಷೇಧದ ಮತ್ತು ಇತರೆ ಅರಿವು ಮೂಡಿಸುವಂತಹ ವಿಷಯಗಳ ಕುರಿತು ಪ್ರಚಾರ ಮಾಡಬೇಕು.ನಗರದ/ಪಟ್ಟಣದ ಉದ್ಯಾನವನಗಳಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ವಹಣೆ ಮಾಡುವುದು. ಸಾರ್ವಜನಿಕ ಶೌಚಾಲಯಗಳ ಬಳಕೆ ಹಾಗೂ ನೈರ್ಮಲ್ಯ ಕಾಪಾಡಬೇಕು ಎಂದು ತಿಳಿಸಿದರು.
ಎಲ್ಲಾ ಉದ್ಯಾನವನಗಳಲ್ಲಿ ಇಲಾಖೆಗಳ ಸಹಕಾರದಿಂದ ಪ್ರತಿ ಶನಿವಾರ ಸಾಂಸ್ಕೃತಿಕ ಸಂಜೆ ಅಥವಾ ರಸ ಸಂಜೆ ಎಂಬ ಕಾರ್ಯಕ್ರಮವನ್ನು ಮಾಡಿ ಸಾರ್ವಜನಿಕರಿಗೆ ಮನರಂಜಿಸುವ ಕೆಲಸವನ್ನು ಮಾಡಲು ಸೂಚಿಸಿದರು.
ಜಿಲ್ಲೆಯ ಎಲ್ಲಾ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತವು ವಿಷೇಶ ಆಸಕ್ತಿವಹಿಸಿದ್ದು, ಸರ್ಕಾರವು ಎಲ್ಲಾ ನಗರಸಭೆ ಹಾಗೂ ಪುರಸಭೆಗಳು ತಮ್ಮ ವ್ಯಾಪ್ತಿ ಯಲ್ಲಿನ ಉದ್ಯಾನವನಗಳನ್ನು ಆರ್ಕಷಕಗೊಳಿಸಿ ಮೂಲಸೌಕರ್ಯಗಳೊಂದಿಗೆ ಸಾರ್ವಜನಿಕರಿಗೆ ಅನುವು ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿರುವ ಎಲ್ಲಾ ಉದ್ಯಾನವನಗಳು ಮತ್ತು ಸರ್ಕಲ್ ಗಳನ್ನು ಸುಂದರವಾಗಿ ಆಕರ್ಷಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪಾರ ಜಿಲ್ಲಾಧಿಕಾರಿ ಮಂಗಳ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್, ಎಲ್ಲಾ ನಗರಸಭೆ ಪುರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ನಗರಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್ ಪೋರ್ಸ್ ರಚಿಸುವ ಬಗ್ಗೆ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್