ಅಧುನಿಕ ಜಗತ್ತಿನ ಅಗತ್ಯಕ್ಕೆ ಬೇಕಿರುವ ತಂತ್ರಜ್ಞಾನ ಕೌಶಲ್ಯ ರೂಪಿಸಿಕೊಳ್ಳಲು ಕರೆ
ಅಧುನಿಕ ಜಗತ್ತಿನ ಅಗತ್ಯಕ್ಕೆ ಬೇಕಿರುವ ತಂತ್ರಜ್ಞಾನ ಕೌಶಲ್ಯ ರೂಪಿಸಿಕೊಳ್ಳಲು ಕರೆ
ಚಿತ್ರ : ಕೋಲಾರದ ಮಂಗಸಂದ್ರ ಶ್ರೀ ಮಂಜುನಾಥ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭಕ್ಕೆ ಕೋಲಾರ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶ್ರೀನಿವಾಸ .ಕೆ ದೀಪ


ಕೋಲಾರ, ೧೧ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವದಲ್ಲಿ ಅದೇ ರೀತಿಯಲ್ಲಿ ದೇಶದಲ್ಲಿ ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ ಇದಕ್ಕೆ ಪೂರಕವಾಗಿ ಕೈಗಾರಿಕಾ ಕಂಪನಿಗಳಿಗೆ ಅಗತ್ಯವಿರುವ ತಂತ್ರಜ್ಞಾನ ಕೌಶಲ್ಯವನ್ನು ತಾಂತ್ರಿಕ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳು ಬೆಳಸಿಕೊಳ್ಳುವಂತೆ ಕೋಲಾರ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶ್ರೀನಿವಾಸ .ಕೆ ಕರೆ ನೀಡಿದರು.

ಕೋಲಾರದ ಮಂಗಸಂದ್ರ ಶ್ರೀ ಮಂಜುನಾಥ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭಕ್ಕೆ ದೀಪ ಬೆಳಗುವ ಮುಖಾಂತರ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ನರಸಾಪುರ, ವೇಮಗಲ್, ಮಾಲೂರು ಕೈಗಾರಿಕಾ ವಲಯವಾಗಿ ಬಹು ದೊಡ್ಡ ಕೈಗಾರಿಕೆಗಳು ಬೆಳೆಯುತ್ತಿವೆ ಹಿಂದೆ ಕೃಷಿ ಪ್ರಧಾನವಾಗಿದ್ದ ಕೋಲಾರ ಜಿಲ್ಲೆ ಇಂದು ಕೈಗಾರಿಕಾ ಪ್ರಧಾನ ಜಿಲ್ಲೆಯಾಗಿ ಮಾರ್ಪಡುತ್ತಿದೆ. ಜಿಲ್ಲೆಗೆ ಹೊಂದಿಕೊಂಡಂತೆ ಹೊಸೂರು, ದೇವನಹಳ್ಳಿ ಕೈಗಾರಿಕಾ ವಲಯಗಳಿವೆ ಮುಂದೆ ಕೆಜಿಎಪ್, ದೇವರಾಯಸಮುದ್ರ ಶ್ರೀನಿವಾಸಪುರದಲ್ಲಿಯು ಕೈಗಾರಿಕಾ ವಲಯ ಸ್ಥಾಪನೆ ಆಗಲಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಐಟಿಐ ಮುಗಿದವರಿಗೆ ಬಹುದೊಡ್ಡ ಅವಕಾಶಗಳಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ರೋಬೋಟಿಕ್ ಸಿಎನ್ಸಿ ಯಂತಹ ತಂತ್ರಜ್ಞಾನದ ಕೈಗಾರಿಕೆಗಳು ನಮ್ಮಲ್ಲಿ ಬಂದಿದ್ದು, ಮುಂದೆಯು ಎಐ ಯಂತಾ ತಂತ್ರಜ್ಞಾನ ಶೀಘ್ರವಾಗಿ ಬರಲಿದ್ದು ಅದಕ್ಕೆ ತಂತ್ರಜ್ಞಾನದ ಪರೀಣಿತರಿಗೆ ಬಹುಬೇಡಿಕೆ ಬರಲಿದೆ ಎಂದರು.

ಕೋಲಾರ ಟಮಕಾ ಕೈಗಾರಿಕಾ ಪ್ರಾರಂಗಣದ ಆರ್ ಆರ್ ಇಂಜಿನಿಯರಿಂಗೆ & ಎಕ್ಸ್ಪೋರ್ಟ್ಸ್ನ ಸಿಇಓ ಜನರಲ್ ಮೇನೇಜರ್ ರವಿಶಂಕರ್.ಬಿ.ಎನ್ ಸಮಾರಂಭದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತ ಐಟಿಐ ಮುಗಿದವರು ಮುಂದಿನ ಐದು, ಹತ್ತು, ಇಪತ್ತು ವರ್ಷಗಳಲ್ಲಿ ನಾನೇನಾಗಬೇಕು, ಯಾವ ಹಂತಕ್ಕೆ ತಲುಪಬೇಕು ಹೇಗೆ ಮನೆಯ ಪರಿಸ್ಥಿತಿಯನ್ನು ಡೊಡ್ಡ ಹಂತಕ್ಕೆ ತಲುಪಿಸಬೇಕು ಕಾರ್ಮಿಕನಾಗಿ ಸೇರಿ ಮುಂದೆ ಕಂಪನಿ ಮುಖ್ಯಸ್ಥನಾಗಬೇಕು ಎಂಬ ಗುರಿ ಇಟ್ಟುಕೊಂಡು ಈಗಲೇ ಕೈಗಾರಿಕೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಿ ಅನುಭವ ಪಡೆಯುತ್ತಾ ಮುಂದುವರಿಯಿರಿ, ತಾಂತ್ರಿಕ ಶಿಕ್ಷಣ ಪಡಿದವರು ಹೆಚ್ಚು ವೇತನ ಸಿಗುತ್ತದೆ ಎಂದು ಮಾರಕಟ್ಟೆ ವಿತರಕರಾಗಿ, ಪ್ರ್ರಚಾರಕರಾಗಿ, ಹಣ ಸಂಗ್ರಹಕರಾಗಿ ಸೇರಿಕೊಳ್ಳವ ಅಲೋಚನೆ ಮಾಡಬೇಡಿ ಆರೀತಿಯದ ಕೆಲವೇ ವರ್ಷಗಳು ಮಾಡಲು ಸಾಧ ಜೀವನ ಪೂರ್ತಿ ಸಾಧ್ಯವಿಲ್ಲ ಅದ್ದರಿಂದ ಕೈಗಾರಿಕಾ ದಾರಿ ಆಯ್ಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶ್ರೀ ಮಂಜುನಾಥ ಐಟಿಐ ಸಂಸ್ಥೆಯ ಮುಖ್ಯಸ್ಥ ಎಂ.ವಿ.ನಾರಾಯಣಸ್ವಾಮಿ ಮಾತನಾಡುತ್ತ, ಐಟಿಐ ಕೋರ್ಸು ಮುಗಿದವರು ಮುಖ್ಯವಾಗಿ ಮೂರು ದಾರಿಗಳಲ್ಲಿ ಮೊದಲನೆಯದು ಕೆಲಸ/ಸ್ವಂತ ಉದ್ದೆಮೆ, ಎರಡನೆಯದು ಅಪ್ರೆಂಟೀಸ್ ತರಬೇತಿ ಎರಡು ವರ್ಷ ಐಟಿಐ ಮತ್ತು ಒಂದು ವರ್ಷ ಅಪ್ರೆಂಟೀಸ್ ತರಬೇತಿ ಡಿಪ್ಲೊಮಾಗೆ ಸಮಾನ, ಮುರನೆಯದು ಬಿಎ, ಬಿಕಾಂ, ಬಿಬಿಎ, ಬಿಎಸ್ಡ್ಬ್ಲೂ, ಪದವಿಗೆ ಸೇರಲು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಐಟಿಐ ಮುಗಿಸಿದವರಿಗೆ ವಿಭಿನ್ನ ಅವಕಾಶಗಳಿದ್ದು ಸರ್ಕಾರಿ ಕೆಲಸ, ಖಾಸಗಿ ಕಂಪನಿಗಳಲ್ಲಿ, ಹೊರ ದೇಶದಲ್ಲಿಯು ಕೆಲಸಕ್ಕೆ ಸೇರಿಕೊಳ್ಳಬಹುದಾಗಿದೆ ಈ ನಿಟ್ಟಿನಲ್ಲಿ ತಮ್ಮ ಮುಂದಿನ ಬದಕು ರೂಪಿಸಿಕೊಳ್ಳುವಂತೆ ತಿಳಿಸಿದರು.

ಇದೇ ವೇಳೆ ಐಟಿಐ ಕೋರ್ಸು ಪೂರ್ಣಗೊಳಿಸಿದವರಿಗೆ ಭಾರತ ಸರ್ಕಾರದ ರಾಷ್ಟೀಯ ವೃತ್ತಿ ತರಬೇತಿ ಪ್ರಮಾಣ ಪತ್ರಗಳನ್ನು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶ್ರೀನಿವಾಸ.ಕೆ ಮತ್ತು ಆಹ್ವಾನಿತ ಅತಿಥಿಗಳು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಆರ್.ಆರ್ ಇಂಜಿನಿಯರಿಂಗೆ ಮತ್ತು ಎಕ್ಸ್ಪೋರ್ಟ್ಸ್ನ ಹೆಚ್.ಆರ್ ಸುನಿಲ್ ಕುಮಾರ್, ಐಟಿಐ ಕಾಲೇಜಿನ ಪ್ರಾಂಶುಪಾಲ ಗಾಂಗಾಧರ್ ಗೋಟ್ಯಾಳ್, ಮನೋಜ್ ಕುಮಾರ್ ಹಾಗೂ ತರಬೇತಿದಾರರು ಪಾಲ್ಗೊಂಡು ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.

ಚಿತ್ರ : ಕೋಲಾರದ ಮಂಗಸಂದ್ರ ಶ್ರೀ ಮಂಜುನಾಥ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭಕ್ಕೆ ಕೋಲಾರ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶ್ರೀನಿವಾಸ .ಕೆ ದೀಪ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande