ಮಂಡ್ಯ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ಪರಿಣಾಮ ಮೂರು ದಿನಗಳಿಂದ ತೀವ್ರ ಉದ್ವಿಗ್ನತೆಯಲ್ಲಿದ್ದ ಮದ್ದೂರು ಪಟ್ಟಣ ಇದೀಗ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಸೆಪ್ಟೆಂಬರ್ 7ರ ರಾತ್ರಿ ಗಣೇಶ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ನಂತರ ಪಟ್ಟಣದಲ್ಲಿ ಅಶಾಂತಿ ವಾತಾವರಣ ಉಂಟಾಗಿತ್ತು. ಮರು ದಿನ ಹಿಂದೂ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಅದಾದ ಬಳಿಕ, ಸೆಪ್ಟೆಂಬರ್ 9 ಮದ್ದೂರು ಬಂದ್‌ಗೆ ಕರೆ ನೀಡಲಾಗಿತ್ತು. ವರ್ತಕರ ಬೆಂಬಲದಿಂದ ಬಂದ್ ಯಶಸ್ವಿಯಾಯಿತು. ಸೆಪ್ಟೆಂಬರ್ 10 ಕಟ್ಟು ನಿಟ್ಟಿನ ಪೊಲೀಸ್ ಭದ್ರತೆಯ ನಡುವೆ ಸಾಮೂಹಿಕ ಬೃಹತ್ ಗಣಪತಿ ವಿಸರ್ಜನೆ ಮೆರವಣಿಗೆ ಶಾಂತಿಯುತವಾಗಿ ನೆರವೇರಿತು.
ಈ ನಡುವೆ, ಮೂರು ದಿನಗಳ ಕಾಲ ಪಟ್ಟಣದ ಅಂಗಡಿ-ಮುಗ್ಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಇಂದಿನಿಂದ ಅಂಗಡಿಗಳು ಎಂದಿನಂತೆ ತೆರೆಯಲ್ಪಟ್ಟಿದ್ದು, ವಾಹನ ಸಂಚಾರವೂ ಸಾಮಾನ್ಯಗೊಂಡಿದೆ.
ಪಟ್ಟಣದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಿದ್ದರೂ, ಭದ್ರತಾ ದೃಷ್ಟಿಯಿಂದ ಪೋಲೀಸರ ನಿಯೋಜನೆ ಮುಂದುವರಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa