ಆತ್ಮಹತ್ಯೆ ಒಂದು ಘೋರ ಅಪರಾಧ : ಡಾ.ಕೆ.ರಾಧಿಕಾ
ಹೊಸಪೇಟೆ, 11 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆವೇ ಪರಿಹಾರವಲ್ಲ ಆತ್ಮವಿಶ್ವಾಸದಿಂದ ಎದರಿಸಬೇಕು. ಆತ್ಮಹತ್ಯೆ ಒಂದು ಘೋರ ಅಪರಾಧ ಎಂದು ಮಾನಸಿಕ ಆರೋಗ್ಯ ಅಧಿಕಾರಿ ಡಾ.ಕೆ.ರಾಧಿಕಾ ತಿಳಿಸಿದ್ದಾರೆ. ನಗರದ ವಿಜಯನಗರ ಮಹಾವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ,
ಆತ್ಮಹತ್ಯೆ ಒಂದು ಘೋರ ಅಪರಾಧ :    ಡಾ.ಕೆ.ರಾಧಿಕಾ


ಹೊಸಪೇಟೆ, 11 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆವೇ ಪರಿಹಾರವಲ್ಲ ಆತ್ಮವಿಶ್ವಾಸದಿಂದ ಎದರಿಸಬೇಕು. ಆತ್ಮಹತ್ಯೆ ಒಂದು ಘೋರ ಅಪರಾಧ ಎಂದು ಮಾನಸಿಕ ಆರೋಗ್ಯ ಅಧಿಕಾರಿ ಡಾ.ಕೆ.ರಾಧಿಕಾ ತಿಳಿಸಿದ್ದಾರೆ.

ನಗರದ ವಿಜಯನಗರ ಮಹಾವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಮಹಾವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಮಾನಸಿಕ ಒತ್ತಡದಿಂದ ಆತ್ಮಹತ್ಯೆಯಂತಹ ಅಲೋಚನೆಗಳು ಹೆಚ್ಚುತ್ತವೆ. ಅದರಲ್ಲೂ ಯುವಜನತೆ ಆತ್ಮಹತ್ಯೆ ಚಿಂತನೆಗಳು ಹೆಚ್ಚಾಗಿ ಕಂಡು ಬಂದಿರುವುದು ಶೋಚನೀಯ. ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಯುವಕರಲ್ಲಿ ನವಚೈತನ್ಯ ಮೂಡಿಸುವ, ಬದುಕಿನ ಭರವಸೆ ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ವರ್ಷದ ಘೋಷಣೆ “ಆತ್ಮಹತ್ಯೆಯ ಬಗ್ಗೆ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದು” ಎಂಬುದಾಗಿದೆ. ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬರುವಂತಹ ಆರಂಭಿಕ ಹಂತದಲ್ಲಿಯೇ ಗುರುತಿಸಿ ಜಾಗೃತಿ ಮೂಲಕ ಬದುಕುವ ಭರವಸೆ, ನೈತಿಕ ಬೆಂಬಲ, ಆತ್ಮವಿಶ್ವಾಸ ಮೂಡಿಸಬೇಕಿದೆ.

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವರು 14 ವರ್ಷದೊಳಗಿನವರು ಎಂಬುದು ಆಘಾತಕಾರಿಯಾಗಿದೆ ನೂನ್ಯತೆ ಇದ್ದವರು ಸಹ ಛಲದಿಂದ ಬದುಕುತ್ತಿದ್ದಾರೆ. ಮಾನಸಿಕವಾಗಿ ಬಳಲುವವರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿಕೊಳ್ಳುವ ಮಟ್ಟಿಗೆ ಇಳಿಯದೇ ಧೃಡದಿಂದ ಒತ್ತಡ ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದರು.

ಜಿಲ್ಲಾ ಮನೋವೈದ್ಯ ಡಾ.ಅನಿಲ್ ಕುಮಾರ್ ಮಾತನಾಡಿ, ಇಂದಿನ ಯುವಸಮೂಹ ಫೇಸ್‌ಬುಕ್, ವಾಟ್ಸಾಪ್, ಪಬ್‌ಜೀ ಯಂತಹ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಂಡು ಖಿನ್ನತೆ ಎಂಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆ ತಕ್ಕಂತೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

ಅತ್ಮಹತ್ಯೆ ಎಂಬುವುದು ಖಿನ್ನತೆ ಖಾಯಿಲೆಯ ಲಕ್ಷಣವಾಗಿದ್ದು, ಜಗತ್ತಿನಲ್ಲಿ ಶೇ.15 ರಿಂದ 20 ಜನರನ್ನು

ಕಾಡುತ್ತಿದೆ. ಈ ಖಾಯಿಲೆ ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯವನ್ನು ಕುಗ್ಗಿಸುವಲ್ಲಿ ಪ್ರಮುಖವಾಗಿದೆ. ಆತ್ಮಹತ್ಯೆ ಯೋಚನೆಯಿಂದ ಹೊರಬರಲು ಸ್ನೇಹಿತರ ಅಥವಾ ಆಪ್ತ ವ್ಯಕ್ತಿಗಳೊಂದಿಗೆ ಬೆರೆಯಬೇಕು. ಮಾದಕ ಮತ್ತು ವ್ಯಸನದಿಂದ ದೂರವಿರಬೇಕು. ಕುಟುಂಬದವರು ವ್ಯಕ್ತಿಯೊಡನೆ ಉತ್ತಮ ಸಂವಹನದಿಂದ ಅವನು ಮಾಡುವ ಕೆಲಸವನ್ನು ಬೆಂಬಲಿಸಬೇಕು. ಸಾಮಾಜಿಕ ಬೆಂಬಲ ಸಿಗುವಂತೆ ಮಾಡಬೇಕು ಮತ್ತು ದಿನನಿತ್ಯ ಧ್ಯಾನ, ವ್ಯಾಯಮಗಳ ರೂಢಿಸಿಕೊಳ್ಳಬೇಕು.

ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಪ್ರೇಕ್ಷಣಾಲಯ ಸ್ಥಳಗಳಿಗೆ ಭೇಟಿ ನೀಡಬೇಕು. ಮನೋವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆಯಬೇಕು. ಮಾನಸಿಕ ಸಮಸ್ಯೆಗಳಿಗೆ ಮುಕ್ತ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ 788789882 ಅಥವಾ ಸ್ನೇಹ ಇಂಡಿಯಾ ಮೊ.4424640060 ಗೆ ಕರೆ ಮಾಡುವ ಮೂಲಕ ಆಪ್ತ ಸಮಾಲೋಚನೆ ಪಡೆದುಕೊಳ್ಳಬಹುದು ಎಂದರು.

ಈ ವೇಳೆಯಲ್ಲಿ ವಿಜಯನಗರ ಕಾಲೇಜು ಪ್ರಾಂಶುಪಾಲರಾದ ಡಾ.ಎಮ್.ಪ್ರಭು ಗೌಡ, ಕನ್ನಡ ವಿಭಾಗದ ಉಪನ್ಯಾಸಕ ಗಾದೆಪ್ಪ, ಜಿ.ಮಾರೇಶ್ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande