ಗ್ರೇಟ್ ನಿಕೋಬಾರ್ ಯೋಜನೆ : ಕಾಂಗ್ರೆಸ್ ವಿರೋಧ
ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಬುಡಕಟ್ಟು ವಿಭಾಗದ ಅಧ್ಯಕ್ಷ ವಿಕ್ರಾಂತ್ ಭೂರಿಯಾ ಗ್ರೇಟ್ ನಿಕೋಬಾರ್ ಯೋಜನೆ ಪರಿಸರ ಮತ್ತು ಬುಡಕಟ್ಟು ಸಮುದಾಯಗಳಿಗೆ ಗಂಭೀರ ಅಪಾಯ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್ ಅಧಿಕೃತ ಎಕ್ಸ ಖಾತೆಯಲ್ಲಿ ಪ್ರಕಟಿಸಿದ ವೀಡಿಯೊ
Vikrant


ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಬುಡಕಟ್ಟು ವಿಭಾಗದ ಅಧ್ಯಕ್ಷ ವಿಕ್ರಾಂತ್ ಭೂರಿಯಾ ಗ್ರೇಟ್ ನಿಕೋಬಾರ್ ಯೋಜನೆ ಪರಿಸರ ಮತ್ತು ಬುಡಕಟ್ಟು ಸಮುದಾಯಗಳಿಗೆ ಗಂಭೀರ ಅಪಾಯ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಅವರು ಕಾಂಗ್ರೆಸ್ ಅಧಿಕೃತ ಎಕ್ಸ ಖಾತೆಯಲ್ಲಿ ಪ್ರಕಟಿಸಿದ ವೀಡಿಯೊದಲ್ಲಿ, ಸರ್ಕಾರದ ಪ್ರಕಾರ ಯೋಜನೆ ಅಡಿಯಲ್ಲಿ 8.5 ಲಕ್ಷ ಮರಗಳನ್ನು ಕತ್ತರಿಸಲು ಯೋಜನೆ ಇದೆ ಆದರೆ, ತಜ್ಞರು ಈ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಈ ಯೋಜನೆಯು ಅರಣ್ಯ ನಾಶವನ್ನು ಉಂಟುಮಾಡುತ್ತದೆ ಮತ್ತು ಅನೇಕ ಬುಡಕಟ್ಟು ಸಮುದಾಯಗಳು ಅಳಿವಿನ ಅಂಚಿನಲ್ಲಿವೆ ಎಂದಿದ್ದಾರೆ. ಈ ಯೋಜನೆಯಿಂದ ದೊಡ್ಡ ಕೈಗಾರಿಕೋದ್ಯಮಿಗಳು ಮಾತ್ರ ಲಾಭ ಪಡೆಯುತ್ತಾರೆ, ಬುಡಕಟ್ಟು ಜನಾಂಗಗಳು ಹಾನಿಯನ್ನು ಅನುಭವಿಸಲಿದ್ದಾರೆ ಎಂದಿದ್ದಾರೆ. ಹಸ್ದಿಯೋ, ಗಡ್ಚಿರೋಲಿ ಮತ್ತು ಪರ್ ತಾಪಿ–ನರ್ಮದಾ ಯೋಜನೆಗಳ ಉದಾಹರಣೆ ನೀಡಿ, ಈ ಎಲ್ಲಾ ಯೋಜನೆಗಳಲ್ಲಿ ಬುಡಕಟ್ಟು ಜನಾಂಗಗಳು ಅತ್ಯಧಿಕ ನಷ್ಟ ಅನುಭವಿಸಿವೆ ಎಂದಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯೋಜನೆಯು ಬುಡಕಟ್ಟು ಜನಾಂಗದವರ ಹತ್ತಿಕ್ಕುವ ಮಾರ್ಗ ಎಂದು ತಮ್ಮ ಲೇಖನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರೇಟ್ ನಿಕೋಬಾರ್ ಯೋಜನೆ ಅಂಡಮಾನ್–ನಿಕೋಬಾರ್ ದ್ವೀಪದ ದಕ್ಷಿಣ ದ್ವೀಪದಲ್ಲಿ ಆಧುನಿಕ ಬಂದರು, ವಿಮಾನ ನಿಲ್ದಾಣ, ಇಂಧನ ಘಟಕಗಳು ಮತ್ತು ವಸತಿ ಪಟ್ಟಣವನ್ನು ಅಭಿವೃದ್ಧಿಪಡಿಸಲು ₹81,000 ಕೋಟಿ ವೆಚ್ಚದಲ್ಲಿ 2022 ರಲ್ಲಿ ಅನುಮೋದನೆ ಪಡೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande