ರಾಯಬರೇಲಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ರಾಯ್‌ಬರೇಲಿಯ ಹರ್ಚಂದ್‌ಪುರ ವಿಧಾನಸಭಾ ಕ್ಷೇತ್ರದ ಬಟೋಹಿ ರೆಸಾರ್ಟ್‌ನಲ್ಲಿ ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
“ಚುನಾವಣಾ ಆಯೋಗ ಈಗ ಸರ್ವಾಧಿಕಾರಿಯಾಗಿದೆ. ಯಾರ ಮಾತನ್ನೂ ಕೇಳುವುದಿಲ್ಲ. ಮತ ಕಳ್ಳತನದ ಕಪ್ಪು-ಬಿಳುಪಿನ ಪುರಾವೆಗಳು ನಮ್ಮ ಬಳಿ ಇವೆ” ಎಂದು ಆರೋಪಿಸಿದರು.
ಮೊದಲಿಗೆ ಚುನಾವಣಾ ಫಲಿತಾಂಶಗಳಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಭಾವಿಸಿದ್ದೇವೆ. ಆದರೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ನೋಡಿದ ಬಳಿಕ, ಮತ ಕದ್ದುಕೊಂಡಿರುವ ಸ್ಪಷ್ಟ ಪುರಾವೆಗಳನ್ನು ಪಡೆದಿದ್ದೇವೆ. ಚುನಾವಣಾ ಆಯೋಗ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರನ್ನು ಸಿಂಹಗಳಿಗೆ ಹೋಲಿಸಿದ ರಾಹುಲ್ ಗಾಂಧಿ, ನಾವು ಎಲ್ಲರೂ ಸಂವಿಧಾನವನ್ನು ರಕ್ಷಿಸಲು ಹೋರಾಡುತ್ತಿದ್ದೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa