ಕೋಲಾರ,೧ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುತ್ತಿರುವವರ ಮೇಲೆ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಆ.೩೧ರಂದು ಧರ್ಮಸ್ಥಳ ಸತ್ಯ ಯಾತ್ರೆ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ತಮ್ಮ ಬೆಂಬಲಿಗರೊಂದಿಗೆ ತೆರಳಿ ವೀರೇಂದ್ರಹೆಗ್ಗಡೆಯವರ ದರ್ಶನ ಪಡೆದು ಗಮನ ಸೆಳೆದರು.
ಅಭಿಮಾನಿಗಗಳೊಂದಿಗೆ ಕೇಸರಿ ಧ್ವಜವಿಡಿದು ತೆರಳಿದ್ದ ಶ್ರೀನಾಥ್ ಸತ್ಯಯಾತ್ರೆಯಲ್ಲಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಭಕ್ತ ವೃಂಧದ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದ್ದು, ಕ್ಷೇತ್ರವನ್ನು ಅಪವಾದಗಳಿಂದ ಮುಕ್ತಗೊಳಿಸಿ, ನೈಜ ಸಂಗತಿ ಹೊರಗೆ ತರಲು ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಧರ್ಮಸ್ಥಳ ಸತ್ಯ ಯಾತ್ರೆ ಹಮ್ಮಿಕೊಂಡಿದ್ದು ಸಫಲವಾಗಿದೆ ಎಂದರು.
ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಯಾತ್ರೆಯು ಧರ್ಮಸ್ಥಳ ತಲುಪಿದ್ದು, ಕೋಲಾರ ಜಿಲ್ಲೆಯ ಸಮಸ್ತ ಭಕ್ತಾಧಿಗಳು, ಮುಖಂಡರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಯಾತ್ರೆಯಲ್ಲಿ ಜೆಡಿಎಸ್ ಮುಖಂಡರಾದ ನಟರಾಜ್, ಅಶೋಕ್, ನಾಗರಾಜ್, ನರೇಶ್, ಬಾಬು, ವಿಜಯ್, ಹೀರೇಗೌಡ, ರಾಮು, ರಘು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಚಿತ್ರ : ಜೆಡಿಎಸ್ ಪಕ್ಷದಿಂದ ಧರ್ಮಸ್ಥಳಕ್ಕೆ ತೆರಳಿದ್ದ ಸತ್ಯಯಾತ್ರೆಯಲ್ಲಿ ಮುಖಂಡ ಸಿಎಂಆರ್.ಶ್ರೀನಾಥ್ ಅವರೊಂದಿಗೆ ನೂರಾರು ಮಂದಿ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್