ವಿಜಯಪುರ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಯಾವ ಸಾಧನೆ ಮಾಡಲು ಬಿಜೆಪಿಯವರು ಧರ್ಮಸ್ಥಳ ಚಲೋ ಹೋದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯ ಮಾಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸೋನಿಯಾಗಾಂಧಿ, ರಾಹುಲ್ ಗಾಂಧಿ ಒತ್ತಾಯದಿಂದ ಎಸ್ಐ ಟಿ ರಚನೆ ಮಾಡಿದರು. ಹಿಂಧೂ ಧರ್ಮದ ಮಂಜುನಾಥ ಸ್ವಾಮಿಯ ದೇವಾಲಯದ ಬಗ್ಗೆ ಅಪನಂಬಿಕೆ ಹುಟ್ಟಿಸುವ ಕೆಲಸ ನಡೆಯಿತು. ಈಗ ಎಸ್ ಐ ಟಿ ಅವರು ಕ್ಲೀಯರ್ ಮಾಡಿದ್ದಾರೆ. ಅಲ್ಲಿ ಯಾವುದೇ ಬುರುಡೆ, ಕುರುಹು ಸಿಕ್ಕಿಲ್ಲ. ಧರ್ಮಸ್ಥಳದ ಮಂಜುನಾಥ ತಂದು ತಾನೇ ಶಕ್ತಿ ತೋರಿಸಿದ್ದಾನೆ. ಈ ವಿಜಯೇಂದ್ರ ಅಲ್ಲಿ ಹೋಗುವದರಿಂದ ಏನಾಗುವುದಿದೆ. ಕರಾವಳಿ ಭಾಗದ ಶಾಸಕರಿಗೆ ವೇದಿಕೆ ಮೇಲೆ ಮಾತನಾಡಲು ಕೊಡಲ್ಲ ಎಂದರು. ಇನ್ನು ಹಿಂದೂ ಪರ ಗಟ್ಟಿಯಾಗಿ ಮಾತನಾಡುವವರು ಒಬ್ಬರೂ ವೇದಿಕೆ ಮೇಲಿಲ್ಲ. ಎಲ್ಲ ಡಿ ಕೆ ಶಿವಕುಮಾರ ಮನ್ಯಾಗ ರಾತ್ರೀ ಊಟ, ಸಿದ್ದರಾಮಯ್ಯ ಮನ್ಯಾಗ ಬೆಳಿಗ್ಗೆ ನಾಸ್ಟಾಗೆ ಹೋಗುವ ಬಿಜೆಪಿ ನಾಯಕರು ಅಲ್ಲಿದ್ದರು. ಬಿಜೆಪಿ ನಾಯಕರ ಮೇಲಿನ ವಿಶ್ವಾಸಾರ್ಹತೆ ಜನರಿಗೆ ಕಡಿಮೆ ಆಗಿದೆ. ಇಂತ ಪೊಳ್ಳು ಧರ್ಮ ಅಭಿಮಾನ ಇದ್ದವರಿಂದ ಬಿಜೆಪಿ ಉದ್ದಾರ ಆಗಲ್ಲ ಎಂದು ಶಾಸಕ ಯತ್ನಾಳ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande