ವಿಜಯಪುರ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಒಂದು ಕೋಮಿನ ಹಬ್ಬದ ಓದಿ ಎಂದು ಮಕ್ಕಳಿಗೆ ಹೇಳೋದು ತಪ್ಪು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಮಕ್ಕಳಿಗೆ ಓದುವ ಅಭಿಯಾನದಲ್ಲಿ ಈದ್ ಮಿಲಾದ್ ಹಬ್ಬ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಸರ್ಕಾರ ತಕ್ಷಣವೇ ಓದು ಅಭಿಯಾನದಿಂದ ಈದ್ ಮಿಲಾದ್ ಹಬ್ಬದ ವಿಷಯ ತೆಗೆದು ಹಾಕಬೇಕು. ಹಿಂದೂ ಹಬ್ಬಗಳ ಬಗ್ಗೆ ಓದಿ ಎಂದು ಒಂದೇ ಒಂದು ವಿಷಯ ಇಲ್ಲ. ದೀಪಾವಳಿ, ದಸರಾ ಬಗ್ಗೆ ಇಲ್ಲ. ಕ್ರಿಸ್ಚಿಯನ್, ಬೌದ್ಧ, ಜೈನ ಧರ್ಮದ ಹಬ್ಬದ ಬಗ್ಗೆಯೂ ಪ್ರಸ್ತಾಪ ಇಲ್ಲ. ಆದ್ರೆ, ಮುಸ್ಲಿಂ ಧರ್ಮದ ಈದ್ ಮಿಲಾದ್ ಬಗ್ಗೆ ಓದುವ ವಿಷಯ ಇದೆ. ಇದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟಿಕರಣ. ಮುಸ್ಲಿಂ ಪರ ಸರ್ಕಾರ ಎಂದು ಯತ್ನಾಳ್ ಕಿಡಿಕಾರಿದರು.
ಅದಕ್ಕಾಗಿ ತಕ್ಷಣವೇ ಈದ್ ಮಿಲಾದ್ ಹಬ್ಬದ ವಿಷಯವನ್ನ ಲಿಸ್ಟ್ ನಿಂದ ತೆಗೆದುಹಾಕುವಂತೆ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande